Advertisement

ಅಡಿಕೆ, ಹುಣಸೆ ಕೊಯ್ಲು: ಹೊಸ ಅನ್ವೇಷಣೆಗೆ ಮುಂದಾಗಲು ಕೃಷಿ ವಿವಿಗೆ ಗ್ರಾಮಸ್ಥರ ಮನವಿ

08:07 PM Jan 17, 2022 | Team Udayavani |

ಕೊರಟಗೆರೆ: ತಾಲ್ಲೂಕಿನಲ್ಲಿ ಹುಣಸೆ ಬೆಳೆ ಕಳೆದ 20 ವರ್ಷಗಳಿಂದ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿದೆ. ರೈತರಿಗೆ ವ್ಯವಸಾಯದ ಜೊತೆಗೆ ಉತ್ತಮ ಆದಾಯದ ಮೂಲವೂ ಆಗಿದೆ.ಹುಣಸೆ ಮರದಲ್ಲಿ ಹಣ್ಣನ್ನು ಬಿಡಿಸಲು ಮರ ಹತ್ತಿ ಬಡಿಯುವವರು ಜಾರಿ ನೆಲಕ್ಕೆ ಬೀಳುವುವರ ಸಂಖ್ಯೆಯೂ
ಹೆಚ್ಚಿದ್ದೂ ಆತಂಕಕ್ಕೆ ಕಾರಣವಾಗಿದೆ.

Advertisement

ಕಳೆದ ವರ್ಷ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹುಣಸೆ ಹಣ್ಣು ಬಡಿಯಲು ಮರ ಹತ್ತಿದ್ದ 8 ಜನರಲ್ಲಿ ನೆಲಕ್ಕೆ ಬಿದ್ದು ಗಾಯಗೊಂಡವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಳೆದ 15 ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಮರದಿಂದ ಬಿದ್ದು ಶಾಶ್ವತ ಅಂಗವಿಕಲರಾಗಿದ್ದಾರೆ.

5-6 ವರ್ಷಗಳಿಂದ ದೊಡ್ಡ ಹುಣಸೆ ಮರಗಳ ಬೆಳೆ ಬಡಿಯುವ ಕಾರ್ಮಿಕರ ಕೊರತೆಯಿಂದ ಹುಣಸೆ ಹಣ್ಣನ್ನು ಖರೀದಿಸುವವರು ಇಲ್ಲದೇ ಮರದಲ್ಲೇ ಹಾಳಾಗಿದೆ.ಪ್ರತಿವರ್ಷ ಮರದಲ್ಲೇ ಹಣ್ಣುಗಳು ಹಾಳಾಗುತ್ತಿರುವುದು ಹೆಚ್ಚುತ್ತಿದೆ. ಕೆಲ ಹಳೆ ಮರಗಳು 60 ಅಡಿಗೂ ಹೆಚ್ಚು ಎತ್ತರವಿದ್ದೂ ಮರದಿಂದ ಜಾರಿ ಬಿದ್ದರೆ ಜೀವಕ್ಕೆ ಅಪಾಯ ಹೆಚ್ಚಾಗಿ ದೆ ಮತ್ತು ಗಾಯಗೊಂಡರೆ ಚೇತರಿಸಿಕೊಳ್ಳುವುದು ಸುಲಭವಲ್ಲ.

ತುಮಕೂರು ಜಿಲ್ಲೆಯಲ್ಲಿ ಎರಡು ಕೃಷಿ ವಿಜ್ಞಾನ ಕೇಂದ್ರಗಳಿದ್ದು ಸರಳ ಯಂತ್ರಗಳನ್ನು ಅಭಿವೃದ್ಧಿಪಡಿಸಿದರೆ ಹುಣಸೆ ಬೆಳೆಗಾರರಿಗೆ ಅನುಕೂಲವಾಗಲಿದೆ. ಬೆಂಗಳೂರು ಕೃಷಿ ವಿ.ವಿ.ಯಲ್ಲಿ ಕೃಷಿಯಂತ್ರಗಳನ್ನು ಸಂಶೋಧಿಸಲು ಇಂಜಿನಿಯರಿಂಗ್ ವಿಭಾಗವಿದ್ದು ಹುಣಸೆ ಮರದ ಹಣ್ಣುಗಳನ್ನು ಬಿಳಿಸುವ ಉಪಕರಣ ಕಂಡುಹಿಡಿದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಹುಣಸೆ ಬೆಳೆಗಾರರು.

ಹಣ್ಣನ್ನು ಬಿಳಿಸಲು ದೋಟಿ

Advertisement

ಬಯಲು ಸೀಮೆಯಲ್ಲಿ ಬಳಕೆಯಲ್ಲಿರುವ ಬಿದಿರಿನ ರೋಟಿ ತರಹವಿರುತ್ತದೆ. 60 ಅಡಿಯ ದೋಟಿಯು ಕೇವಲ 5-6 ಕೆಜಿಯಿರುತ್ತದೆ. ಪ್ರತಿ 8-10 ಅಡಿ ಎತ್ತರಕ್ಕೆ ಮಾಡಿಕೊಂಡು ನಮಗೆ ಬೇಕಾದ ಎತ್ತರದಲ್ಲಿ ಲಾಕ್ ಮಾಡಿಕೊಂಡು ಮರದಿಂದ ಹಣ್ಣನ್ನು ಸುಲಭವಾಗಿ ಬಿಳಿಸಬಹುದು.

ದೋಟಿಗಳು ಮಲೆನಾಡಿನ ಕರಾವಳಿ ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ನೆಮ್ಮದಿ ತಂದಿರುತ್ತದೆ.
ನೆಲದ ಮೇಲೆ ನಿಂತುಕೊಂಡು ಹುಣಸೆ ಹಣ್ಣು ಕೀಳುವ ವ್ಯವಸ್ಥೆ ಬಂದರೆ ಬೆಳೆಗಾರರು ನೆಮ್ಮದಿ ಯಿಂದ ಜೀವಿಸ ಬಹುದು. ರೈತರಲ್ಲಿ ದೊಡ್ಡ ಅತಂಕ ನಿವಾರಣೆಯಾಗುತ್ತದೆ 
ಚಿಕ್ಕೇಗೌಡ-ಬಿಸಾಡಿಹಳ್ಳಿ, ಗೊಲ್ಲರಹಟ್ಟಿ ,ಹುಣಸೇ ಹಣ್ಣಿನ ಬೆಳೆಗಾರ.

ಮರದಿಂದ ಹುಣಸೆ ಹಣ್ಣನ್ನು ಬಿಳಿಸುವ ಮತ್ತು ಸಿಪ್ಪೆ ಸುಲಿಯುವ , ಹಣ್ಣಿನದ ಬೀಜ ತೆಗೆದು ತಿರುವಿಹಾಕುವ ಸರಳವಾದ ಯಂತ್ರಗಳ ಅನ್ವೇಷಣೆಯಾಗಬೇಕಿದೆ.
ರವಿ ಗುತ್ತಿಗೆದಾರ. ತೋವಿನಕೆರೆ.

5 ವರ್ಷದ ಹಿಂದೆ ಹುಣಸೆ ಮರದಿಂದ ಹಣ್ಣುಗಳನ್ನು ಬಿಳಿಸುವಾಗ ಮರದಿಂದ ಬಿದ್ದು ಕೃಷಿ ಕೆಲಸ ಮಾಡಲಾಗುತ್ತಿಲ್ಲ.
ಸಿದ್ದಗಂಗಯ್ಯ- ದೊಡ್ಡಗೌಡನಪಾಳ್ಯ

ನೆಲದ ಮೇಲೆ ನಿಂತು ಗೊಂಡು ಹುಣಸೆ ಮರದಿಂದ ಹಣ್ಣನ್ನು ಬೀಳಿಸಲು ಸರಳ ಉಪಕರಣ ಶೀಘ್ರವಾಗಿ ಅಭಿವೃದ್ಧಿಪಡಿಸಬೇಕು.
ಪುಟ್ಟತಿಮ್ಮಯ್ಯಡಿ.ಕೆ. ರೈತ ದಮಗಲಯ್ಯನಪಾಳ್ಯ

ಸಿದ್ದರಾಜು.ಕೆ

Advertisement

Udayavani is now on Telegram. Click here to join our channel and stay updated with the latest news.

Next