Advertisement
ಪರಿಸರ ಜಲಸಂರಕ್ಷಣೆ, ರಸ್ತೆ ಸುರಕ್ಷೆ, ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಟರಿಣಾಮಗಳ ಅರಿವು ಹಾಗೂ ಜಾಥಾವು ರೋಟರಿ ರಾಯಲ್ ಸರಕಾರ ಭಾರತಿ, ಉಡುಪಿ ಪೋಲಿಸ್ ವಿಭಾಗ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಇಂದ್ರಾಳಿಯಿಂದ ಎಂ.ಜಿ.ಎಂ ಕಾಲೇಜಿನವರೆಗೆ ನಡೆದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ, ವಿದ್ಯಾರ್ಥಿಗಳು ಸಮಾಜದ ರಾಯಭಾರಿಗಳಾಗಿ ವರ್ತಿಸಿ, ರಸ್ತೆ ಸುರಕ್ಷೆಯ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಮಾದಕ ದ್ರವ್ಯ, ಮೊಬೈಲ್ಗೆ ದಾಸರಾಗದೆ ಉತ್ತಮ ನಾಗರಿಕರಾಗಿರಬೇಕು ಎಂದರು. ಗಿಡಗಳನ್ನು ಬೆಳೆಸಿ
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದ ಬಾಲಕೃಷ್ಣ ಮಧ್ದೋಡಿ ಪರಿಸರ ಹಾಗೂ ಜಲಸಂರಕ್ಷಣೆ ಬಗ್ಗೆ ಮಾತನಾಡಿ, ನಾವು ಉಸಿರಾಡುವ ಗಾಳಿ ಶುದ್ಧವಾಗಿರಬೇಕಾದರೆ ನಮ್ಮ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಕುಡಿಯುವ ನೀರನ್ನು ಪೋಲು ಮಾಡಬಾರದು. ಆದಷ್ಟು ನೀರು ಭೂಮಿಯಲ್ಲಿ ಇಂಗುವಂತೆ ಮಾಡಿ ಅಂತರ್ಜಲವನ್ನು ಕಾಪಾಡಿಕೊಳ್ಳಬೇಕು ಎಂದರು.
Related Articles
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಮಾತನಾಡಿ, ಪರಿಸರವನ್ನು ಸುಂದರ, ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದರು.
Advertisement
ಶಾಲಾ ಮುಖೋಪಾಧ್ಯಾಯ ಕೆ. ವಿನಾಯಕ ಕಿಣಿ ಮಾತನಾಡಿ, ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಉಡುಪಿ ರೋಟರಿಯ ಡಾ| ಸುರೇಶ್ ಶೆಣೈ, ರೋಟರಿ ಉಡುಪಿ ರಾಯಲ್ಸ್ ಅಧ್ಯಕ್ಷ ಬಿ.ಕೆ. ಯಶವಂತ್, ನಿಕಟಪೂರ್ವ ಅಧ್ಯಕ್ಷ ರತ್ನಾಕರ, ಪೋಲಿಸ್ ಅಧಿಕಾರಿ ನಾರಾಯಣ್, ಪ್ರಾಥಮಿಕ ಶಾಲಾ ಮುಖೋಪಾಧ್ಯಾಯ ರಾಜೇಶ್ ಉಪಸ್ಥಿತರಿದ್ದರು.
ಆಶಿಕಾ ಸ್ವಾಗತಿಸಿ, ಶ್ರೀಕರ ವಂದಿಸಿದರು. ರಂಜಿತ್ ರಾವ್ ನಿರೂಪಿಸಿದರು.