Advertisement

ರಾಗಿ ಕಟಾವು ಮಾಡಲು ಕಾರ್ಮಿಕರ ಕೊರತೆ

04:07 PM Dec 12, 2019 | Suhan S |

ದೇವನಹಳ್ಳಿ: ತಾಲೂಕಿನಲ್ಲಿ ಸುಮಾರು 3 ವರ್ಷಗಳಿಂದಲೂ ತೀವ್ರ ಬರಗಾಲ ಆವರಿಸಿ, ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಉತ್ತಮ ಹಿಂಗಾರು ಮಳೆಯಿಂದ ರಾಗಿ ಬೆಳೆ ಉತ್ತಮ ಇಳುವರಿಗೆ ಬಂದಿದೆ.ಆದರೆ ಕಟಾವು ಮಾಡಲು ಜಡಿ ಮಳೆಯ ವಾತಾವರಣ ಹಾಗೂ ಕೂಲಿ ಆಳುಗಳ ಕೊರತೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕಟಾವು ಮಾಡಲು ಒಬ್ಬ ಕಾರ್ಮಿಕರಿಗೆ ದಿನಕ್ಕೆ 300 ರಿಂದ 500 ರೂ.ಕೊಡಬೇಕು. ಎಕರೆ ಲೆಕ್ಕಚಾರದ ಪ್ರಕಾರ ಒಪ್ಪಂದದಂತೆ 1 ಎಕರೆಗೆ 6 ಸಾವಿರ ರೂ. ಕೇಳುತ್ತಾರೆ.ಕಟಾವು ಮಾಡುವ ಯಂತ್ರ ಗಂಟೆಗೆ 4ಸಾವಿರದಂತೆ ಪಕ್ಕದ ಆಂಧ್ರ ಪ್ರದೇಶದಿಂದ ಬಂದಿವೆ. ಯಂತ್ರಗಳಲ್ಲಿ ಕಟಾವು ಮಾಡಿಸಿದರೆ ರಾಗಿ ಹಾಗೂ ಹುಲ್ಲು ಪುಡಿಯಾಗಿ ಗುಣಮಟ್ಟ ಕಳೆದುಕೊಳ್ಳುತ್ತದೆ ಎಂದು ರೈತ ರಮೇಶ್‌ ಹೇಳುತ್ತಾರೆ. ಚನ್ನರಾಯಪಟ್ಟಣ ಹೋಬಳಿ 2035 ಎಕ್ಟೇರ್‌ರಾಗಿ ಬಿತ್ತನೆಆಗಿದ್ದು, ಈಗ ಶೇ 50 ರಷ್ಟು ಬೆಳೆ ಕಟಾವು ಮಾಡಿದ್ದಾರೆ.ತಾಲೂಕಿಗೆ ಬೆಳೆ ಕಟಾವು ಮಾಡುವಒಂದುಚೈನ್‌ಯಂತ್ರ ನೀಡಲಾಗಿತ್ತು. ರಾಗಿ ಬೆಳೆ ನೆಲಕ್ಕೆ ಉರುಳಿರುವ ಕಾರಣ ಯಂತ್ರಕ್ಕೆ ಕಟಾವು ಮಾಡಲು ಸಾಧ್ಯ ವಿಲ್ಲದಕಾರಣ ವಾಪಸ್ಸು ಕಳಿಸಿದ್ದೇವೆ. ದಿಕ್ಕು ತೋಚದರೈತರು ಪಕ್ಕದರಾಜ್ಯದ ಖಾಸಗಿ ಯಂತ್ರಗಳ ಮೊರೆ ಹೋಗಿದ್ದಾರೆ ಎಂದು ಕೃಷಿ ಅಧಿಕಾರಿ ಬೇವಿನಕಟ್ಟಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next