Advertisement

ಟ್ವಿಟರ್‌ ಖಾತೆ ನಿಷ್ಕ್ರಿಯಗೊಳಿಸಿದ ನಟ ಹರ್ಷವರ್ದನ್‌

06:43 PM Nov 27, 2021 | Team Udayavani |

ಮುಂಬಯಿ: ಬಾಲಿವುಡ್‌ ನಟ ಹರ್ಷವರ್ದನ್‌ ರಾಣೆ ಅವರು ತಮ್ಮ ಟ್ವಿಟರ್‌ ಹ್ಯಾಂಡಲ್‌ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ತಮ್ಮ ಕಲೆ ಮತ್ತು ನಟನೆ ಬಗ್ಗೆ ಮಾತ್ರ ಇನ್ನು ಮುಂದೆ ಗಮನ ಹರಿಸುತ್ತೇನೆ. ಹಾಗಾಗಿ ಸಾಮಾಜಿಕ ಜಾಲತಾಣದಿಂದ ನಿರ್ಗಮಿಸುತ್ತಿದ್ದೇನೆ ಎಂದು ಅವರು ತಮ್ಮ ಇನ್‌ಸ್ಟಾ ಗ್ರಾಂ ಖಾತೆಯ ಮೂಲಕ ತಿಳಿಸಿದ್ದಾರೆ.

Advertisement

ಟ್ವಿಟರ್‌ನಲ್ಲಿ ನನ್ನ ಈವರೆಗಿನ ಪ್ರಯಾಣ ಖುಷಿಕೊಟ್ಟಿದೆ. ಇನ್ನು ಮುಂದೆ ನಾನು ಈ ಸಾಮಾಜಿಕ ಜಾಲತಾಣದಿಂದ ನಿರ್ಗಮಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. 2022ರಲ್ಲಿ ತಮ್ಮ ನಟನೆಯ ಶ್ರೇಷ್ಠತೆಯನ್ನು ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next