ಕೋಲ್ಕತ್ತಾ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟಿ20 ಪಂದ್ಯವನ್ನು ಗೆದ್ದ ಭಾರತ ತಂಡ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಕೋಲ್ಕತ್ತಾ ಪಂದ್ಯವನ್ನು 73 ರನ್ ಗಳಿಂದ ರೋಹಿತ್ ಪಡೆ ಗೆದ್ದುಕೊಂಡಿದೆ.
ಈ ಸರಣಿಯಲ್ಲಿ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್ ಕೋಲ್ಕತ್ತಾ ಪಂದ್ಯದಲ್ಲೂ ಮಿಂಚಿದರು. ಬ್ಯಾಟಿಂಗ್ ನಲ್ಲೂ ಮಿಂಚಿದ ಅವರು 11 ಎಸೆತಗಳಲ್ಲಿ 18 ರನ್ ಗಳಿಸಿದರು. ಬೌಲಿಂಗ್ ನಲ್ಲೂ ಎರಡು ವಿಕೆಟ್ ಪಡೆದು ಮಿಂಚಿದರು.
ಆದರೆ ಹರ್ಷಲ್ ಪಟೇಲ್ ಹಿಟ್ ವಿಕೆಟ್ ರೂಪದಲ್ಲಿ ಔಟಾದರು. ಲ್ಯೂಕಿ ಫರ್ಗುಸನ್ ಎಸೆತದಲ್ಲಿ ಕಟ್ ಹೊಡೆಯಲು ಹೋದ ಹರ್ಷಲ್ ಬ್ಯಾಟ್ ನಿಂದ ವಿಕೆಟ್ ಗೆ ಹೊಡೆದರು. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಈ ರೀತಿ ಔಟಾದ ಕೇವಲ ಎರಡನೇ ಆಟಗಾರ ಎಂಬ ಕೆಟ್ಟ ದಾಖಲೆ ಬರೆದರು. ಕೆ.ಎಲ್.ರಾಹುಲ್ ಅವರು ಒಮ್ಮೆ ಹೀಗೆ ಔಟಾಗಿದ್ದರು.
Related Articles
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡ ಏಳು ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ 56 ರನ್, ಕೀಪರ್ ಇಶಾನ್ ಕಿಶನ್ 29 ರನ್, ಮತ್ತು ಕೊನೆಯಲ್ಲಿ ದೀಪಕ್ ಚಾಹರ್ ಬಿರುಸಿನ 21 ರನ್ ಕಾಣಿಕೆ ನೀಡಿದರು.
ಇದನ್ನೂ ಓದಿ:ಸರಣಿ ಭಾರತ ಕೈವಶ: ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ಗುರಿ ಬೆನ್ನತ್ತಿದ ಕಿವೀಸ್ ಬ್ಯಾಟಿಂಗ್ ನಡೆಸಲು ಪರದಾಡಿತು. ಗಪ್ಟಿಲ್ 51 ರನ್ ಗಳಿಸಿದರೆ, ನಂತರ 17 ರನ್ ಗಳಿಸಿದ ಸೀಫರ್ಟ್ ಅವರದ್ದೇ ಹೆಚ್ಚಿನ ಗಳಿಕೆ. ಕಿವೀಸ್ 17.2 ಓವರ್ ಗಳಲ್ಲಿ 111 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಪರ ಅಕ್ಷರ್ ಪಟೇಲ್ ಕೇವಲ 9 ರನ್ ನೀಡಿ ಮೂರು ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಎರಡು ವಿಕೆಟ್ ಕಿತ್ತರು.