ಶಿವಮೊಗ್ಗ: ನಗರದ ಇತಿಹಾಸದಲ್ಲಿ ಒಂದು ರೀತಿಯ ಸಂಚು ನಡೆದಿದ್ದು, ಹಿಂದೂ ಯುವಕನ ಕಗ್ಗೋಲೆಯಾಗಿದೆ.ಇದರ ಸತ್ಯಾಸತ್ಯತೆ ಹೊರಗೆ ಬರಲು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಗೆ ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ.
ಹರ್ಷ ಅಂತಿಮ ಸಂಸ್ಕಾರದ ಬಳಿಕ ಮಾತನಾಡಿದ ಅವರು, ಈ ಬಗ್ಗೆ ಸಿಎಂ ಜೊತೆ ನಾಳೆ ಮಾತನಾಡುತ್ತೇನೆ. ಮುಸ್ಲಿಂ ಗುಂಡಾಗಳು ಬಂದು ಕೊಲೆ ಮಾಡಿ, ಬೆಂಗಳೂರಿಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿ 3 ಜನರನ್ನು ಅರೆಸ್ಟ್ ಆಗಿದ್ದಾರೆ ಎಂದು ಗೃಹ ಸಚಿವರೇ ಹೇಳಿದ್ದಾರೆ.ಇದರ ಹಿಂದೆ ಇನ್ನೂ ಯಾರ್ಯಾರು ಇದ್ದಾರೆ ಎಂದು ಸಹ ತನಿಖೆಯಿಂದ ಹೊರಗೆ ಬರಬೇಕು ಎಂದರು.
ಶವದ ಮೆರವಣಿಗೆ ಸಂದರ್ಭದಲ್ಲಿ ಅನೇಕ ಹೊರಗಿನ ಜನರನ್ನು ನೋಡಿದ್ದೇನೆ.ಅದರಲ್ಲೂ ದೊಡ್ಡ ಸಂಖ್ಯೆಯಲ್ಲಿ ಹಲವರನ್ನು ನೋಡಿದ್ದೇನೆ. ಅಂತಿಮ ಸಂಸ್ಕಾರದಲ್ಲಿ ನಾನು ಭಾಗಿಯಾಗಲು ಬೆಂಗಳೂರಿನಿಂದ ಬಂದಿದ್ದೇನೆ. ಅವರ ಕುಟುಂಬಸ್ಥರು ಅವರ ರೋಧನದ ನಡುವೆ ತಪ್ಪಿತಸ್ಥರ ಶಿಕ್ಷೆಗೆ ಒತ್ತಾಯಿಸಿದ್ದಾರೆ ಎಂದರು.
ಮೆರವಣಿಗೆಯು ಪೊಲೀಸರು ಹಾಗೂ ಸಂಘಟರ ಹಿಡಿತ ತಪ್ಪಿ ಆಗಿದೆ.ನಾನು ಯುವಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇ. ಯುವಕರು ಸಹ ಸ್ಪಂದಿಸಿದ್ದರು.ಅದರೇ ಮುಂದೆ ಮೆರವಣಿಗೆಯಲ್ಲಿ ಕಲ್ಲು ತೂರಾಟ ಅಯಿತು.ಇದಕ್ಕೆಲ್ಲಾ ಹೊರಗಿನಿಂದ ಬಂದವರು ಕಲ್ಲು ತೂರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಮುಸ್ಲಿಂ ಗುಂಡಾಗಳ ವಿರುದ್ಧ ಕ್ರಮ ಕೈಗೋಳ್ಳುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಎನ್ಐಎ ಮೂಲಕ ತನಿಖೆಯಾದರೆ, ಕೊಲೆಗಡುಕರು ಸಿಕ್ಕಿಹಾಕೋಳ್ಳುತ್ತಾರೆ.ಜೊತೆಗೆ ಹೊರಗಿನಿಂದ ಬಂದವರು ಯಾರು ಎಂದು ಗೊತ್ತಾಗುತ್ತೆ ಎಂದು ಈಶ್ವರಪ್ಪ ಅಭಿಪ್ರಾಯ ಹೋರ ಹಾಕಿದರು.