ಶಿವಮೊಗ್ಗ : ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ದಾಳಿ ವೇಳೆ ಆರೋಪಿಗಳ ಬಳಿಯಲ್ಲಿ ಮೊಬೈಲ್ ಹಾಗೂ ಇತರ ಉಪಕರಣಗಳು ಪತ್ತೆಯಾಗಿವೆ.
ಪರಪ್ಪನ ಅಗ್ರಹಾರ ಜೈಲ್ ನ ಆಯ್ದ ಸೆಲ್ಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಆರೋಪಿಗಳ ಸೆಲ್ಗಳ ಮೇಲೂ ದಾಳಿ ಮಾಡಿದಾಗ, ಆರೋಪಿಗಳಿಗೆ ವಿಶೇಷ ಆರೈಕೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಹಿಂದೂ ಹರ್ಷನ ಕೊಲೆ ಆರೋಪಿಗಳಾದ ಖಾಸೀಫ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿರುವ ಸೆಲ್ ಗಳಲ್ಲಿ ಸೆಲ್ಫಿ ಶೂಟ್ ಮಾಡಿಸಿಕೊಂಡಿದ್ದು, ಜೈಲಿನಲ್ಲಿದ್ದೇ ಆರೋಪಿಗಳಿಂದ ಹಲವರಿಗೆ ವಿಡಿಯೋ ಕಾಲ್ ಮಾಡಲಾಗಿದೆ.
ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿರುವ ವಿಡಿಯೋಗಳು, ಬೇರೆಯದ್ದೆ ರೀತಿಯಲ್ಲಿ ಎಡಿಟ್ ಮಾಡಿ ಲಾಂಗು , ಮಚ್ಚಿನ ಹಾಡುಗಳೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಡಲಾಗಿದೆ.
ಮನೆಯವರಿಗೂ ಮೊಬೈಲ್ ತಮ್ಮ ಸೆಲ್ಗೆ ತರಿಸಿಕೊಂಡ ಆರೋಪಿಗಳು ವಿಡಿಯೋ ಕಾಲ್ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿದ್ದು, ಯೋಗಕ್ಷೇಮ ವಿಚಾರಿಸಲು ಈ ರೀತಿ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವುದು ಕಾರಾಗೃಹ ವ್ಯವಸ್ಥೆಯ ಬಗ್ಗೆ ಬಲವಾದ ಪ್ರಶ್ನೆಗಳು ಮೂಡಿವೆ.
ಈ ಸಂಬಂಧ ಪರಪ್ಪನ ಅಗ್ರಹಾರದ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಪ್ಪು ಮಾಡಿದ ಜೈಲು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.