ಅಹಮದಾಬಾದ್: ಈ ಸೀಸನ್ ನ ಐಪಿಎಲ್ ನಲ್ಲಿ ಈಗಾಗಲೇ 23 ಪಂದ್ಯಗಳು ನಡೆದಿದೆ. ಹಲವು ಹೊಸ ಪ್ರತಿಭೆಗಳು ಮಿಂಚಿದರೆ, ಈಗಾಗಲೇ ಛಾಪು ಮೂಡಿಸಿರುವ ಆಟಗಾರರು ಕೂಡಾ ತಮ್ಮ ಆಟ ಪ್ರದರ್ಶಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರು ರವಿವಾರದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಆಟವಾಡಿದರು. ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ತಮ್ಮ ಇನ್ನಿಂಗ್ಸ್ ನಲ್ಲಿ 32 ಎಸೆತದಲ್ಲಿ ಆರು ಭರ್ಜರಿ ಸಿಕ್ಸರ್ ಮೂಲಕ 60 ರನ್ ಚಚ್ಚಿದರು. ಅದರಲ್ಲೂ ಸ್ಪಿನ್ನರ್ ರಶೀದ್ ಖಾನ್ ಅವರ ಓವರ್ ನಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದರು.
ಕಳೆದ ಕೆಲವು ವರ್ಷಗಳಿಂದ ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಸಂಜು ಸ್ಯಾಮ್ಸನ್ ಎಂದಿಗೂ ರಾಷ್ಟ್ರೀಯ ತಂಡದ ಖಾಯಂ ಸದಸ್ಯನಾಗಿಲ್ಲ. ಒಂದೊಂದು ಪಂದ್ಯಗಳಿಗೆ ಅವಕಾಶ ಪಡೆಯುವ ಸ್ಯಾಮ್ಸನ್ ನಂತರ ಹೊರ ಬೀಳುತ್ತಾರೆ. ಇದೀಗ ಸ್ಯಾಮ್ಸನ್ ರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಪರಿಗಣಿಸಬೇಕು ಎಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ:Mangaluru ಅದ್ದೂರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ ವೇದವ್ಯಾಸ ಕಾಮತ್
ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರೂ ಈ ಬಗ್ಗೆ ಮಾತನಾಡಿದ್ದಾರೆ. ಟೈಟಾನ್ಸ್ ವಿರುದ್ಧ ರಾಯಲ್ಸ್ ತಂಡದಲ್ಲಿ ಸ್ಯಾಮ್ಸನ್ ನಾಯಕತ್ವವನ್ನು ನೋಡಿದ ಭೋಗ್ಲೆ ಟ್ವೀಟ್ ಮಾಡಿದ್ದು “ನಾನು ಪ್ರತಿಬಾರಿ ಭಾರತೀಯ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್‌ನನ್ನು ಆಡಿಸುತ್ತೇನೆ” ಎಂದಿದ್ದಾರೆ.
ಅಡಿದ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ.