Advertisement

WHO ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್: ವರದಿ

09:01 AM May 20, 2020 | Mithun PG |

ನವದೆಹಲಿ: ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷ್ ವರ್ಧನ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಇದೇ 22ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಪಾನ್​ನ ಡಾ. ಹಿರೋಕಿ ನಕಾಟಾನಿ ಅವರ ಸ್ಥಾನವನ್ನು ಹರ್ಷ್ ವರ್ಧನ್ ತುಂಬಲಿದ್ದಾರೆ ಎಂದು ಹಿಂದೂ ಸ್ಥಾನ್ ಟೈಮ್ಸ್ ವರದಿ ಮಾಡಿದೆ.

Advertisement

ಮೇ 22 ರಂದು ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಆರೋಗ್ಯ ಖಾತೆ ಸಚಿವ ಡಾ. ಹರ್ಷ್ ವರ್ಧನ್  ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚುನಾವಣೆಯು ಕಾರ್ಯವಿಧಾನದ   ಔಪಾಚಾರಿಕತೆಯಿಂದ ಕೂಡಿರುತ್ತದೆ ಎಂದು ತಿಳಿದು ಬಂದಿದೆ.

“ಇದು ಪೂರ್ಣ ಸಮಯದ ಹುದ್ದೆ ಅಲ್ಲ.  ಆದರೆ ಕಾರ್ಯನಿರ್ವಾಹಕ ಮಂಡಳಿಯ ದ್ವಿ-ವಾರ್ಷಿಕ ಸಭೆಗಳ ಅಧ್ಯಕ್ಷತೆಯನ್ನು ವಹಿಸಲು ಡಾ. ಹರ್ಷ್ ವರ್ಧನ್ ಅವರ ಅಗತ್ಯವಿದೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ 34 ಮಂದಿ ಸದಸ್ಯರಿದ್ದಾರೆ. ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ 194 ದೇಶಗಳನ್ನೊಳಗೊಂಡ ವಿಶ್ವ ಆರೋಗ್ಯ ಸಭೆಯಲ್ಲಿ ಸಹಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಸಾಮಾನ್ಯವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು ತನ್ನ ಸಚಿವರನ್ನೇ ಆ ಸ್ಥಾನಕ್ಕೆ ಕೂರಿಸಲು ನಿರ್ಧರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ಸೇರಿದಂತೆ ಮೂರು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ನೀಡಲು ಕಳೆದ ವರ್ಷವೇ ನಿರ್ಧರಿಸಲಾಗಿತ್ತು. ಕೇಂದ್ರ ಸಚಿವರಾಗಿರುವ ಹರ್ಷ್ ವರ್ಧನ್ ಅವರು ಡಬ್ಲ್ಯೂಎಚ್​ಒದಲ್ಲಿ ಪೂರ್ಣಾವಧಿ ಕರ್ತವ್ಯ ನಿಭಾಯಿಸುವ ಅಗತ್ಯ ಇರುವುದಿಲ್ಲ. ವರ್ಷಕ್ಕೆ ಎರಡು ಬಾರಿ ನಡೆಯುವ ಸಭೆಗಳ ನೇತೃತ್ವ ವಹಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ.

Advertisement

ಮಾಜಿ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 2016 ರಲ್ಲಿ ಡಬ್ಲ್ಯುಎಚ್‌ಎಯ ಇದೇ ರೀತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next