Advertisement

ಇಂದು ನಿಧನರಾದ ತಮ್ಮ ತಾಯಿಯ ನೇತ್ರ ದಾನ ಮಾಡಿದ ಕೇಂದ್ರ ಸಚಿವ ಹರ್ಷವರ್ಧನ್

08:21 PM Sep 06, 2020 | Mithun PG |

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಮ್ಮ ತಾಯಿಯ ಕಣ್ಣುಗಳನ್ನು ಏಮ್ಸ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಹರ್ಷವರ್ಧನ್ ಅವರ ತಾಯಿ ಇಂದು ಮುಂಜಾನೆ ನಿಧನರಾಗಿದ್ದರು.

Advertisement

ತನ್ನ ನಿಧನದ ನಂತರ ನೇತ್ರದಾನ ಮಾಡಬೇಕೆಂದು ತಾಯಿಯ ಇಚ್ಚೆಯಾಗಿತ್ತು.  ಈ ಕಾರಣದಿಂದ ಇಂದು ಏಮ್ಸ್ ಹಾಸ್ಪತ್ರೆಗೆ ಕಣ್ಣುಗಳನ್ನು ದಾನ ಮಾಡಿರುವುದಾಗಿ ಹರ್ಷವರ್ಧನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮಾತ್ರವಲ್ಲದೆ ತಾಯಿಯ ದೇಹವನ್ನು ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಇಂದು ಬೆಳಗ್ಗೆ ತಾಯಿಯನ್ನು ಕೇಂದ್ರ ಸಚಿವ ಹರ್ಷವರ್ಧನ್ ಕಳೆದುಕೊಂದ್ದರು. ನನಗೆ ನನ್ನ ತಾಯಿಯೇ ಮಾರ್ಗದರ್ಶಕರಾಗಿದ್ದರು. ಅವರದ್ದು ಉನ್ನತ ವ್ಯಕ್ತಿತ್ವ ಎಂದು ಭಾವನಾತ್ಮಕ ಪೋಸ್ಟ್​ ಹಾಕಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next