ನವದೆಹಲಿ: ಐಪಿಎಲ್ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಈ ನಡುವೆ ಕೆಲ ಆಟಗಾರರು ಅಂತಿಮ ಹಂತದಲ್ಲಿ ಟೂರ್ನಿಯಿಂದ ಹೊರಬೀಳುತ್ತಿದ್ದಾರೆ. ಇದೀಗ ಡೆಲ್ಲಿ ತಂಡದ ಸ್ಟಾರ್ ಬ್ಯಾಟರ್ ಐಪಿಎಲ್ ನಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಐಪಿಎಲ್ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿದೆ. ಗಾಯದ ಕಾರಣದಿಂದ ಚೆನ್ನೈ ತಂಡದ ಡೇವಿನ್ ಕಾನ್ವೆ ಆರಂಭಿಕ ಪಂದ್ಯಗಳಿಗೆ ಲಭ್ಯರಾಗಿರುವುದಿಲ್ಲ. ಅದೇ ರೀತಿ ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ್ ಕೃಷ್ಣ ಗಾಯದ ಕಾರಣದಿಂದ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ.
ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಸ್ಪೋಟಕ ಆಟಗಾರ ಹ್ಯಾರಿ ಬ್ರೂಕ್ ವೈಯಕ್ತಿಕ ಕಾರಣದಿಂದ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
ವೈಯಕ್ತಿಕ ಕಾರಣಗಳನ್ನು ನೀಡಿ ಹ್ಯಾರಿ ಬ್ರೂಕ್ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಅವರನ್ನು 4 ಕೋಟಿ ರೂ.ಗೆ ಖರೀಸಿತ್ತು. ಈ ಹಿಂದಿನ ಸೀಸನ್ ನಲ್ಲಿ ಬ್ರೂಕ್ ಹೈದರಾಬಾದ್ ಪರವಾಗಿ ಆಡಿದ್ದರು.
ಭಾರತದ ವಿರುದ್ಧದ ಟೆಸ್ಟ್ ಪಂದ್ಯದದಲ್ಲಿ ಇಂಗ್ಲೆಂಡ್ ತಂಡದಲ್ಲಿ ಬ್ರೂಕ್ ಸ್ಥಾನ ಪಡೆದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರು ಸರಣಿಯಿಂದ ಹಿಂದೆ ಸರಿದಿದ್ದರು.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಬ್ಯೂಕ್ ಅವರ ಬದಲಿಗೆ ಹೊಸ ಆಟಗಾರರನ್ನು ಹುಡುಕಬೇಕಿದೆ.