Advertisement
“ರಿವರ್‌ಸೈಡ್ ಗ್ರೌಂಡ್’ನಲ್ಲಿ ನಡೆದ ಮುಖಾಮುಖೀ ಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 304 ರನ್ ಪೇರಿಸಿತು. ಜವಾಬಿತ್ತ ಇಂಗ್ಲೆಂಡ್ 37.4 ಓವರ್‌ಗಳಲ್ಲಿ 4 ವಿಕೆಟಿಗೆ 254 ರನ್ ಗಳಿಸಿದ ವೇಳೆ ಮಳೆ ಸುರಿದ ಕಾರಣ ಪಂದ್ಯ ಮುಂದುವರಿಯಲಿಲ್ಲ. ಆಗ ಡಿಎಲ್‌ಎಸ್ ನಿಯಮದಂತೆ ಇಂಗ್ಲೆಂಡ್ 46 ರನ್ ಮುನ್ನಡೆಯಲ್ಲಿತ್ತು. ಮೊದಲೆರಡು ಪಂದ್ಯಗಳನ್ನು ಕಾಂಗರೂ ಪಡೆ ಜಯಿಸಿತ್ತು. 4ನೇ ಪಂದ್ಯ ಶುಕ್ರವಾರ ಲಾರ್ಡ್ಸ್‌ನಲ್ಲಿ ನಡೆಯಲಿದೆ.
ಇದರೊಂದಿಗೆ ಆಸ್ಟ್ರೇಲಿಯದ ಸತತ ಗೆಲುವಿನ ಓಟ 14 ಪಂದ್ಯಗಳಿಗೆ ಕೊನೆಗೊಂಡಿತು. ಆಸೀಸ್ ಕೊನೆಯ ಸಲ ಸೋತದ್ದು, 2023ರ ಏಕದಿನ ವಿಶ್ವಕಪ್‌ನಲ್ಲಿ. ಅದು ದಕ್ಷಿಣ ಆಫ್ರಿಕಾ ವಿರುದ್ಧದ ಲಕ್ನೋ ಪಂದ್ಯವಾಗಿತ್ತು. ಹಾಗೆಯೇ ಇದು ಆಸ್ಟ್ರೇಲಿಯ ವಿರುದ್ಧ ಸತತ 7 ಪಂದ್ಯಗಳನ್ನು ಸೋತ ಬಳಿಕ ಇಂಗ್ಲೆಂಡ್ ಸಾಧಿಸಿದ ಮೊದಲ ಜಯವಾಗಿದೆ. ಪಂದ್ಯ ಕೊನೆಗೊಂಡಾಗ ಹ್ಯಾರಿ ಬ್ರೂಕ್ 110 ರನ್ ಮಾಡಿ ಅಜೇಯರಾಗಿದ್ದರು. ಇದು ಏಕದಿನದಲ್ಲಿ ಬ್ರೂಕ್ ಬಾರಿಸಿದ ಮೊದಲ ಶತಕ ಹಾಗೂ ಅವರ ನಾಯಕತ್ವದಲ್ಲಿ ಇಂಗ್ಲೆಂಡ್‌ಗೆ ಒಲಿದ ಮೊದಲ ಜಯ.