Advertisement

“ಸಾಮರಸ್ಯ ಕದಡುತ್ತಿರುವ ಸಚಿವ’

01:18 PM Dec 28, 2017 | Team Udayavani |

ದೇವನಹಳ್ಳಿ: ಅಸಂವಿಧಾನಿಕ ಪದಗಳನ್ನು ಬಳಸಿ ಸಂವಿಧಾನ ವಿರೋಧಿಸಿ ಸಮಾಜದ ಸಾಮರಸ್ಯ ಕದಡುತ್ತಿರುವ ಬೇಜವಾಬ್ದಾರಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್‌ ಅಧ್ಯಕ್ಷ ಕೆ. ಆರ್‌.ನಾಗೇಶ್‌ ಒತ್ತಾಯಿಸಿದ್ದಾರೆ.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮತ್ತು ತಾಲೂಕು ಯುವ ಕಾಂಗ್ರೆಸ್‌ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ “ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು’ ಎಂಬ ಹೇಳಿಕೆ ನೀಡಿ ಡಾ.ಅಂಬೇಡ್ಕರ್‌ ಅವರನ್ನು  ಅವಮಾನಿಸಿದ್ದಾರೆ. ಸಚಿವರಾಗಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಇವರು ಸಂವಿಧಾನದ ಮಹತ್ವ ಮರೆತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದ್ದ ಕೇಂದ್ರ ಸರ್ಕಾರದ ಸಚಿವರು ಇಂಥ ಬೇಜವಾಬ್ದಾರಿ ಮಾತು ನಡವಳಿಕೆಗಳ ಮೂಲಕ ಅಪಪ್ರಚಾರವೆಸಗಿದ್ದಾರೆ. ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.

ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಸುಮಂತ್‌ ಮಾತನಾಡಿ, ಕೇಂದ್ರ ಸಚಿವ ಸಂಸದರಾಗಿ ಚುನಾಯಿತರಾಗ
ಬೇಕಾದರೆ ಈ ದೇಶದ ಸಂವಿಧಾನವೇ ಆಧಾರ.  ವಿಧಾನಕ್ಕೆ ದ್ರೋಹ ಬಗೆದು ನಡೆದುಕೊಳ್ಳುತ್ತಿರುವ ಇವರ ನಡೆ ಈ ದೇಶದ ಜನತೆ ತಲೆ ತಗ್ಗಿಸುವಂತಹ ಕೆಲಸಮಾಡುತ್ತಿರುವುದು ಶೋಚನೀಯ ಎಂದು ಹಾರಿಹಾಯ್ದರು.

ಐಎನ್‌ಟಿಯು ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಯು. ಎಂ.ಮಿಥುನ್‌, ಕಾರ್ಯಾಧ್ಯಕ್ಷ ರಾಜೇಶ್‌, ಮುಖಂಡ ಹರೀಶ್‌,
ರಮೇಶ್‌, ಮುನಿರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next