Advertisement
“ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಕೊರೊನಾ ಟೆಸ್ಟ್‌ಗೆ ಒಳಗಾಗಿದ್ದೆ. ಮಂಗಳವಾರ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ’ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.ಇರ್ಫಾನ್ ಪಠಾಣ್‌ಗೆ ಕೊರೊನಾ ಸೋಂಕು ಸೋಮವಾರ ರಾತ್ರಿಯೇ ದೃಢಪಟ್ಟಿತ್ತು. ಇದಕ್ಕೂ ಕೆಲವು ದಿನ ಮೊದಲು ಸಹೋದರ ಯೂಸುಫ್ ಪಠಾಣ್ ಅವರಿಗೂ ಕೊರೊನಾ ಅಂಟಿತ್ತು. ಇವರಿಬ್ಬರೂ ರೋಡ್ ಸೇಫ್ಟಿ ಕ್ರಿಕೆಟ್ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ತಂಡದ ನಾಯಕ ಸಚಿನ್ ತೆಂಡುಲ್ಕರ್, ಬ್ಯಾಟ್ಸ್‌ಮನ್ ಎಸ್. ಬದರೀನಾಥ್ ಅವರಲ್ಲೂ ಕೊರೊನಾ ಪಾಸಿಟಿವ್ ಕಂಡುಬಂದಿದೆ.
Related Articles
ಬೋನ್ಪೋರಸ್ ಬಾಕ್ಸಿಂಗ್ ಟೂರ್ನಿಗಾಗಿ ಟರ್ಕಿಗೆ ತೆರಳಿರುವ ಭಾರತ ತಂಡದ 8 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇವರಲ್ಲಿ 3 ಮಂದಿ ಬಾಕ್ಸರ್‌ಗಳಾಗಿದ್ದು, ಉಳಿದವರು ತಂಡದ ಅಧಿಕಾರಿ, ಫಿಸಿಯೊ ಹಾಗೂ ಇತರ ಸಿಬಂದಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಗೌರವ್ ಸೋಲಂಕಿ, ಪ್ರಗ್ಯಾನ್ ಚೌಹಾಣ್ ಮತ್ತು ಬೃಜೇಶ್ ಯಾದವ್ ಕೊರೊನಾ ಪಾಸಿಟಿವ್ ಹೊಂದಿರುವ ಬಾಕ್ಸರ್‌ಗಳಾಗಿದ್ದಾರೆ.
ಮಾ. 19ರಂದು ಬಾಕ್ಸಿಂಗ್ ಟೂರ್ನಿ ಮುಗಿದ ಬಳಿಕ ಇವರೆಲ್ಲ ಕ್ವಾರಂಟೈನ್‌ನಲ್ಲಿದ್ದರು. ಕೋಚ್‌ಗಳಾದ ಧರ್ಮೇಂದ್ರ ಯಾದವ್, ಸಂತೋಷ್ ಬಿರ್ಮೋಲೆ, ಫಿಸಿಯೋಗಳಾದ ಶಿಖಾ ಕೇಡಿಯಾ, ಡಾ| ಉಮೇಶ್, ವೀಡಿಯೋ ಅನಾಲಿಸ್ಟ್ ನಿತಿನ್ ಕುಮಾರ್ ಅವರೆಲ್ಲ ಐಸೊಲೇಶನ್‌ನಲ್ಲಿರುವ ಇತರರು ಎಂದು ತಂಡದ ಮೂಲ ತಿಳಿಸಿದೆ.
ಒಮ್ಮೆ ಪಾಸಿಟಿವ್ ಬಂದರೆ ಒಂದು ವಾರದ ಬಳಿಕ ಮತ್ತೂಂದು ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕಿದ್ದು, ಇದರಲ್ಲಿ ನೆಗೆಟಿವ್ ಬಂದರಷ್ಟೇ ಅವರಿಗೆ ಭಾರತಕ್ಕೆ ವಿಮಾನವೇರಲು ಸಾಧ್ಯವಾಗುತ್ತದೆ.