Advertisement
ಕ್ಯಾಂಟರ್ಬರಿಯಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 111 ಎಸೆತಗಳಿಂದ ಅಜೇಯ 143 ರನ್ ಸಿಡಿಸಿದ ಸಾಧನೆಯಿಂದ ಹರ್ಮನ್ಪ್ರೀತ್ ಕೌರ್ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿದ್ದು ಐದನೇ ಸ್ಥಾನ ಪಡೆದಿದ್ದಾರೆ. ಸರಣಿಯ ಎರಡು ಪಂದ್ಯಗಳಲ್ಲಿ ಅನುಕ್ರಮವಾಗಿ 40 ಮತ್ತು 50 ರನ್ ಗಳಿಸಿದ್ದ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಒಂದು ಸ್ಥಾನ ಮೇಲಕ್ಕೇರಿದ್ದು ಆರನೇ ಸ್ಥಾನ ಪಡೆದಿದ್ದಾರೆ.
ಸರಣಿಯ ಎರಡು ಪಂದ್ಯಗಳಲ್ಲಿ ತಲಾ 4 ವಿಕೆಟ್ ಪಡೆದ ರೇಣುಕಾ ಸಿಂಗ್ 35 ಸ್ಥಾನ ಮೇಲಕ್ಕೇರಿದ್ದು 35ನೇ ಸ್ಥಾನ ಪಡೆದಿದ್ದಾರೆ. ವಿದಾಯ ಸರಣಿಯಲ್ಲಿ ಆಡಿದ ವೇಗಿ ಜೂಲನ್ ಗೋಸ್ವಾಮಿ ಐದನೇ ಸ್ಥಾನದೊಂದಿಗೆ ನಿವೃತ್ತಿಯಾಗಿದ್ದಾರೆ. ಆಲ್ರೌಂಡರ್ ಪಟ್ಟಿಯಲ್ಲಿ ವೆಸ್ಟ್ಇಂಡೀಸ್ನ ನಾಯಕಿ ಹೇಲೆ ಮ್ಯಾಥ್ಯೂಸ್ ನಂ. ವನ್ ಸ್ಥಾನವನ್ನು ಅಲಂಕರಿಸಿದ್ದಾರೆ.