Advertisement

ವಿವಾದ ಮುಕ್ತಾಯ ಹರ್ಮನ್‌ ಪ್ರೀತ್‌ಗೆ ಡಿಸಿಪಿ ಹುದ್ದೆ

06:15 AM Feb 23, 2018 | Team Udayavani |

ಹೊಸದಿಲ್ಲಿ: ಕೊನೆಗೂ ಭಾರತ ತಂಡದ ಕ್ರಿಕೆಟ್‌ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ಗೆ ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಡಿಸಿಪಿ ಹುದ್ದೆ ನೀಡಲಾಗಿದೆ. ವೆಸ್ಟರ್ನ್ ರೈಲ್ವೇಸ್‌ನ ಉದ್ಯೋಗ ಬಿಡಲು ಎದುರಾಗಿದ್ದ ಸಮಸ್ಯೆ ಬಗೆಹರಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಹರ್ಮನ್‌ಪ್ರೀತ್‌, ಸಮಸ್ಯೆಯನ್ನು ಬಗೆಹರಿಸಿ ಡಿಸಿಪಿ ಹುದ್ದೆ ಪಡೆಯಲು ನೆರವಾದ ಪಂಜಾಬ್‌ ಸಿಎಂ ಅಮರಿಂದರ್‌ಜೀ ಮತ್ತು ರೈಲ್ವೇ ಸಚಿವರಾದ ಪೀಯೂಷ್‌ ಗೋಯಲ್‌ ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿತ್ತು. ಈ ಕೂಟದಲ್ಲಿ ಹರ್ಮನ್‌ಪ್ರೀತ್‌ ಭರ್ಜರಿ ಪ್ರದರ್ಶನ ನೀಡಿದ್ದರು. ಇದರಿಂದ ಪಂಜಾಬ್‌ ಸರಕಾರ ಹರ್ಮನ್‌ಪ್ರೀತ್‌ಗೆ ಡಿಸಿಪಿ ಹುದ್ದೆಯನ್ನು ಘೋಷಿಸಿತ್ತು. ಅನಂತರ ಹರ್ಮನ್‌ ತಾವು 3 ವರ್ಷದಿಂದ ಉದ್ಯೋಗದಲ್ಲಿದ್ದ ವೆಸ್ಟರ್ನ್ ರೈಲ್ವೇಸ್‌ಗೆ ರಾಜೀನಾಮೆ ನೀಡಿದ್ದರು. ಆದರೆ ವೆಸ್ಟರ್ನ್ ರೈಲ್ವೇಸ್‌ನಲ್ಲಿ 5 ವರ್ಷದ ಒಪ್ಪಂದವಾಗಿತ್ತು. ಹೀಗಾಗಿ ಅದಕ್ಕೂ ಮುನ್ನ ಹುದ್ದೆ ತೆರೆಯಬೇಕಾದರೆ ಭಾರೀ ಮೊತ್ತದ ದಂಡವನ್ನು ಕಟ್ಟಬೇಕಿತ್ತು. ಹೀಗಾಗಿ ಹರ್ಮನ್‌ಪ್ರೀತ್‌ ಈ ವಿಷಯವನ್ನು ಪಂಜಾಬ್‌ ಸಿಎಂ ಗಮನಕ್ಕೆ ತಂದಿದ್ದರು. ಪಂಜಾಬ್‌ ಸಿಂಗ್‌ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ಬರೆದು ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next