Advertisement

ವಿಶ್ವ ಮಹಿಳಾ ಟಿ20 ತಂಡಕ್ಕೆ ಹರ್ಮನ್‌ ನಾಯಕಿ

06:05 AM Nov 26, 2018 | Team Udayavani |

16 ದಿನಗಳ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಐಸಿಸಿ ಈ ಕೂಟದ ಸಾಧಕರ ತಂಡವೊಂದನ್ನು ಪ್ರಕಟಿಸಿದೆ. 

Advertisement

ಇದರಲ್ಲಿ ಭಾರತದ ಮೂವರು ಸ್ಥಾನ ಸಂಪಾದಿಸಿದ್ದಾರೆ. ಇವರೆಂದರೆ ಸ್ಮತಿ ಮಂಧನಾ, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಪೂನಂ ಯಾದವ್‌. ಅಚ್ಚರಿಯೆಂದರೆ, ಕೌರ್‌ ಅವರನ್ನು ಈ ತಂಡದ ನಾಯಕಿಯನ್ನಾಗಿ ನೇಮಿಸಿರುವುದು! ರನ್ನರ್ ಅಪ್‌ ಇಂಗ್ಲೆಂಡ್‌ ತಂಡದ ಮೂವರು, ಚಾಂಪಿಯನ್‌ ಆಸ್ಟ್ರೇಲಿಯದ ಇಬ್ಬರು; ಪಾಕಿಸ್ತಾನ, ನ್ಯೂಜಿಲೆಂಡ್‌ ಮತ್ತು ವೆಸ್ಟ್‌ ಇಂಡೀಸಿನ ತಲಾ ಒಬ್ಬರು ಆಟಗಾರ್ತಿಯರು ಇದರಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗರಾದ ಇಯಾನ್‌ ಬಿಷಪ್‌, ಅಂಜುಮ್‌ ಚೋಪ್ರಾ, ಎಬೋನಿ ರೇನ್‌ಫೋರ್ಡ್‌ ಬ್ರೆಂಟ್‌, ಪತ್ರಕರ್ತೆ ಮೆಲಿಂಡಾ ಫಾರೆಲ್‌, ಐಸಿಸಿಯ ಜನರಲ್‌ ಕ್ರಿಕೆಟ್‌ ಮ್ಯಾನೇಜರ್‌ ಜೆಫ್ ಅಲಡೈìಸ್‌ ಸೇರಿಕೊಂಡು ಈ ತಂಡವನ್ನು ರಚಿಸಿದ್ದಾರೆ.

ಐಸಿಸಿ ಇಲೆವೆನ್‌
1. ಅಲಿಸ್ಸಾ ಹೀಲಿ (ಆಸ್ಟ್ರೇಲಿಯ), 225 ರನ್‌
2. ಸ್ಮತಿ ಮಂಧನಾ (ಭಾರತ), 178 ರನ್‌
3. ಆ್ಯಮಿ ಜೋನ್ಸ್‌ (ಇಂಗ್ಲೆಂಡ್‌, ವಿ.ಕೀ.), 107 ರನ್‌, 5 ಕ್ಯಾಚ್‌/ಸ್ಟಂಪಿಂಗ್‌
4. ಹರ್ಮನ್‌ಪ್ರೀತ್‌ ಕೌರ್‌ (ಭಾರತ, ನಾಯಕಿ), 183 ರನ್‌
5. ಡಿಯಾಂಡ್ರಾ ಡೊಟಿನ್‌ (ವೆಸ್ಟ್‌ ಇಂಡೀಸ್‌), 121 ರನ್‌, 10 ವಿಕೆಟ್‌
6. ಜವೇರಿಯಾ ಖಾನ್‌ (ಪಾಕಿಸ್ಥಾನ), 136 ರನ್‌
7. ಎಲಿಸ್‌ ಪೆರ್ರಿ (ಆಸ್ಟ್ರೇಲಿಯ), 60 ರನ್‌, 9 ವಿಕೆಟ್‌
8. ಲೀಗ್‌ ಕ್ಯಾಸ್ಪರೆಕ್‌ (ನ್ಯೂಜಿಲ್ಯಾಂಡ್‌), 8 ವಿಕೆಟ್‌
9. ಅನ್ಯಾ ಶ್ರಬೊÕàಲ್‌ (ಇಂಗ್ಲೆಂಡ್‌), 7 ವಿಕೆಟ್‌
10. ಕಸ್ಟಿì ಗಾರ್ಡನ್‌ (ಇಂಗ್ಲೆಂಡ್‌), 8 ವಿಕೆಟ್‌
11. ಪೂನಂ ಯಾದವ್‌ (ಭಾರತ), 8 ವಿಕೆಟ್‌
12ನೇ ಆಟಗಾರ್ತಿ: ಜಹನಾರಾ ಆಲಂ (ಬಾಂಗ್ಲಾದೇಶ), 6 ವಿಕೆಟ್‌

Advertisement

Udayavani is now on Telegram. Click here to join our channel and stay updated with the latest news.

Next