Advertisement
ಏಕಪಕ್ಷೀಯ ಪಂದ್ಯದಲ್ಲಿ ಅದು ಗುಜರಾತ್ ಜೈಂಟ್ಸ್‌ಗೆ 143 ರನ್ನುಗಳ ಸೋಲುಣಿಸಿತು.
ಓಪನರ್ ಹ್ಯಾಲಿ ಮ್ಯಾಥ್ಯೂಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬಿರುಸಿನ ಆಟ ಮುಂಬೈ ಸರದಿಯ ಆಕರ್ಷಣೆ ಆಗಿತ್ತು.
Related Articles
Advertisement
ಅಮೇಲಿಯಾ ಕೆರ್ ಕೂಡ ಆಕರ್ಷಕ ಬ್ಯಾಟಿಂಗ್ ನಡೆಸಿದರು. ಅವರ ಕೊಡುಗೆ ಅಜೇಯ 45 ರನ್ (24 ಎಸೆತ, 6 ಬೌಂಡರಿ, 1 ಸಿಕ್ಸರ್). ಐಸಿ ಲಾಂಗ್ ಪಂದ್ಯದ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದರು.
ಗುಜರಾತ್‌ನ ಅಗ್ರ ಕ್ರಮಾಂಕದ ಐವರಲ್ಲಿ ಮೂವರು ಖಾತೆಯನ್ನೇ ತೆರೆಯಲಿಲ್ಲ. ಕುಸಿತ ಎಷ್ಟು ತೀವ್ರವಾಗಿತ್ತೆಂದರೆ, 23 ರನ್ ಆಗುವಷ್ಟರಲ್ಲಿ 7 ಮಂದಿ ಪೆವಿಲಿಯನ್ ಸೇರಿ ಆಗಿತ್ತು.
ಮೊದಲಿಗರು…ಪಂದ್ಯಾವಳಿಯ ಮೊದಲ ಟಾಸ್ ಗೆದ್ದವರು ಗುಜರಾತ್ ಜೈಂಟ್ಸ್ ನಾಯಕಿ ಬೆತ್ ಮೂನಿ. ಮೊದಲ ಓವರ್ ಆ್ಯಶ್ಲಿ ಗಾರ್ಡನರ್ ಎಸೆದರೆ, ಮೊದಲ ಎಸೆತ ಯಾಸ್ತಿಕಾ ಭಾಟಿಯಾ ಎದುರಿಸಿದರು. ಅವರೇ ಮೊದಲ ರನ್ ಹೊಡೆದು ಮೊದಲಿಗರಾಗಿ ಔಟಾದರು. ಕೂಟದ ಈ ಪ್ರಥಮ ವಿಕೆಟ್ ತನುಜಾ ಕನ್ವರ್ ಪಾಲಾಯಿತು. ಮೊದಲ ಸಿಕ್ಸರ್ ಹಾಗೂ ಬೌಂಡರಿ ಹ್ಯಾಲಿ ಮ್ಯಾಥ್ಯೂಸ್ ಬ್ಯಾಟ್‌ನಿಂದ ಸಿಡಿಯಿತು. ಇದನ್ನು ನೀಡಿದವರು ಮಾನ್ಸಿ ಜೋಶಿ. ಮೊದಲ ಅರ್ಧ ಶತಕ ಕೌರ್ ಅವರಿಂದ ದಾಖಲಾಯಿತು. ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿ ಯನ್ಸ್-5 ವಿಕೆಟಿಗೆ 207 (ಕೌರ್ 65, ಮ್ಯಾಥ್ಯೂಸ್ 47, ಕೆರ್ ಔಟಾಗದೆ 45, ಸ್ಕಿವರ್ 23, ಪೂಜಾ 15). ಗುಜರಾತ್ ಜೈಂಟ್ಸ್ 15.1 ಓವರ್‌ಗಳಲ್ಲಿ 64 ರನ್ನಿಗೆ ಆಲೌಟ್ (ದಯಾಲನ್ ಹೇಮಲತಾ 29, ಸೈಕಾ ಐಶಾಕ್ 11ಕ್ಕೆ 4).