ಕಳೆದ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಆವೃತ್ತಿಯನ್ನು ಪರಿಚಯಿಸಿದ ಹಾರ್ಲೆ ಡೇವಿಡ್ಸನ್ ಸಂಸ್ಥೆ ನೂತನ ಲೈವ್‌ವೈರ್ ಬೈಕಿನ ತಯಾರಿಕೆ ಮತ್ತು ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ.
ಉತ್ಪಾದನಾ ಹಂತದಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿದ್ದು, ಸಮಸ್ಯೆ ಪರಿಹಾರ ಆಗುವ ತನಕ ತಯಾರಿಕ ಚಟುವಟಿಕೆಯನ್ನು ಸ್ಥಗಿತಗೊಳಿಸುವುದಾಗಿ ಕಂಪೆನಿ ಅಧಿಕೃತ ಮಾಹಿತಿ ನೀಡಿದೆ.
ಮಾಹಿತಿಗಳ ಪ್ರಕಾರ, ಹೊಸ ಲೈವ್‌ವೈರ್ ಬೈಕಿನ ಬ್ಯಾಟರಿ ಚಾರ್ಜಿಂಗ್ ಸಿಸ್ಟಂ ನಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡಿಬಂದಿದ್ದು, ಟೆಸ್ಟ್ ರೈಡ್ ವೇಳೆ ಕೆಲವು ಅನುಭವಿ ಬೈಕ್ ಸವಾರರು ಈ ಕುರಿತಂತೆ ಹಾರ್ಲೆ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಪರಿಣಿತ ಬೈಕ್ ಸವಾರರು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಾರ್ಲೆ ಸಂಸ್ಥೆ ತಾಂತ್ರಿಕ ದೋಷ ಸಂಪೂರ್ಣವಾಗಿ ಪರಿಹಾರ ಆಗೋವರೆಗೂ ಯಾವುದೇ ರೀತಿಯ ಉತ್ಪಾದನಾ ಕಾರ್ಯಗಳು ನಡೆಯುವುದಿಲ್ಲ ಎಂದು ತಿಳಿಸಿದೆ.
ಲೈವ್‌ವೈರ್ ಎಲೆಕ್ಟ್ರಿಕ್ ಸೂಪರ್ ಬೈಕ್ ಸದ್ಯ ಭಾರತ ಸೇರಿದಂತೆ ಅಮೇರಿಕಾ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಈ ಹಿನ್ನೆಲೆ ಬಿಡುಗಡೆಗೂ ಮುನ್ನ ಪ್ರದರ್ಶನಗೊಳಿಸಿ ಆಯ್ದ ಮೋಟಾರ್ ನ್ಪೋರ್ಟ್ ಗ್ರಾಹಕರಿಗೆ ಮಾತ್ರವೇ ಟೆಸ್ಟ್ ರೈಡ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎನ್ನಲಾಗುತ್ತಿದೆ.