Advertisement
ಡಿ.7 ರಂದು ನಾರಾವಿ ಶ್ರೀ ವೇಣು ಗೋಪಾಲ ಕೃಷ್ಣ ಸಭಾಭವನದಲ್ಲಿ ಹಮ್ಮಿ ಕೊಂಡ ನಾರಾವಿ ಗ್ರಾ.ಪಂ. ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೂಜೋಡಿ ಉಮೇಶ್ ಮಾತನಾಡಿ, 25 ಮಲೆಕುಡಿಯ ಕುಟುಂಬಗಳು ಅರಣ್ಯ ತೊರೆದು ಸರಕಾರದ ಜಾಗವಾದ ನೂಜೋಡಿ ಯಲ್ಲಿ ವಾಸಿಸುತ್ತಿದೆ. ಅಕ್ರಮ ಸಕ್ರಮಕ್ಕಾಗಿ 1998ರಿಂದ ಅರ್ಜಿ ಸಲ್ಲಿಸಲಾಗಿದೆ. ಅರಣ್ಯ ಹಾಗೂ ಕಂದಾಯ ಸಮಜಾಯಿಸಿ ನೀಡುತ್ತಿದೆ. ಶಾಸಕರು ಪ್ರತಿಕ್ರಿಯಿಸಿ ಸ್ಥಳ ತನಿಖೆ ಮಾಡಿ ವಾಸ್ತವ ಸ್ಥಿತಿ ತಿಳಿಯೋಣ ಎಂದು ಹೇಳಿದರು.
Related Articles
Advertisement
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು -ನಾರಾವಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ವೈದ್ಯರ ಕೊರತೆ ನೀಗಿಸಿ. ವಾರ ಪೂರ್ತಿ ಮಧುಮೇಹ ಪರೀಕ್ಷೆಗೆ ವ್ಯವಸ್ಥೆ ಮಾಡಿ.
-ಪಶು ಇಲಾಖೆಗೆ ವೈದ್ಯರನ್ನು ನೇಮಿಸಿ : ವಸಂತ ನಾರಾವಿ
-ಮಾಹಿತಿ ನೀಡದೆ ವಿದ್ಯುತ್ ಸರಬರಾಜು ಕಡಿತ ಮಾಡಬೇಡಿ
-ಮುರುವಾಜೆ ಜನರಿಗೆ ಸೇತುವೆ ಕಲ್ಪಿಸಿ: ಸಂತೋಷ್ ಕುತ್ಲೂರು
-ಪಡಿತರ ಚೀಟಿಯಿಲ್ಲದೆಸೌಲಭ್ಯ ದೊರೆಯುತ್ತಿಲ್ಲ;ಕ್ರಮ ವಹಿಸಿ
-ಸೋಲಾರ್ ಸೌಲಭ್ಯ ಆಗಬೇಕು
-ಶಾಲೆಗಳಿಗೆ ಶೌಚಾಲಯ ಒದಗಿಸಲು ಆಗ್ರಹ
-ಹಲವು ರಸ್ತೆಗಳ ನಿರ್ವಹಣೆಗೆ ಆಗ್ರಹ
-ಜೆಜೆಎಂ ನಡಿ ನೀರಿನ ಸಂಪರ್ಕ ಕೂಡಲೇ ಒದಗಿಸಿ ನಿವೇಶನ ಅರ್ಜಿಗಳು ಫಲಪ್ರದವಾಗಿಲ್ಲ
ಉದಯ್ ಹೆಗ್ಡೆ ನಾರಾವಿ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕಡೆ ನಿವೇಶನ ಮೀಸಲಿರಿಸಲಾಗಿದೆ. ಒಟ್ಟು 380 ಅರ್ಜಿ ಬಂದಿವೆ. ಕಳೆದ ಒಂದೂವರೆ ವರ್ಷದಿಂದ ನಿವೇಶನ ಹಂಚಿಕೆಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಸ್ಥಳ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡೂವರೆ ಸೆಂಟ್ಸ್ ಬದಲು 6 ಸೆಂಟ್ಸ್ ಸ್ಥಳ ಒದಗಿಸಬೇಕು ಎಂದಾಗ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕರು ಹೇಳಿದರು.