Advertisement

Belthangady: ನಾಮಪತ್ರ ಸಲ್ಲಿಸಿದ Harish Poonja

02:57 PM Apr 17, 2023 | Team Udayavani |

ಬೆಳ್ತಂಗಡಿ: ಎಲ್ಲೆಲ್ಲೂ ಕೇಸರಿ, ಬೇಸಿಗೆ ಬಿಸಿಲಿನಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಬಿಜಿಪಿ ಅಭ್ಯರ್ಥಿ, ಹಾಲಿ ಶಾಸಕ ಹರೀಶ್ ಪೂಂಜ ಅವರ ನಾಮಪತ್ರ ಸಲ್ಲಿಕೆಗೆ ಜನಸಾಗರವೇ ಹರಿದು ಬಂತು.

Advertisement

ಮುಂಜಾನೆ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಂತೆಕಟ್ಟೆ ಮುಖ್ಯರಸ್ತೆಯಾಗಿ ಒಂದುವರೆ ಕಿ.ಮೀ. ಸಾಗಿ ಬಸ್ ನಿಲ್ದಾಣವಾಗಿ ಆಡಳಿತ ಸೌಧದಲ್ಲಿರುವ ಚುನಾವಣಾ ಕಚೇರಿಗೆ ಆಗಮಿಸಿದರು.

ಚುನಾವಣಾ ಅಧಿಕಾರಿ ಯೋಗೇಶ್ ಎಚ್.ಆರ್. ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ಹರಿಕೃಷ್ಣ ಬಂಟ್ವಾಳ್, ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕುಶಾಲಪ್ಪ ಗೌಡ ಸಹಿತ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next