Advertisement

‘ಗುರುವಾಯನಕೆರೆಯಲ್ಲೂ ಅಕ್ವೇರಿಯಂ ಸ್ಥಾಪನೆಯಾಗಲಿ’

02:05 AM Jun 29, 2018 | Karthik A |

ವೇಣೂರು: ಅಳಿವಿನ ಅಂಚಿನಲ್ಲಿರುವ ಜೀವರಾಶಿಗಳ ಬೆಳವಣಿಗೆಗೆ ಮುಂದಾಗಿರುವ ಇಲಾಖೆಗಳ ನಿರ್ಧಾರ ಶ್ಲಾಘನೀಯ. ಪಿಲಿಕುಳ ನಿಸರ್ಗಧಾಮದಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ, ಅಕ್ವೇರಿಯಂ ಯೋಜನೆ ಗುರುವಾಯನ ಕೆರೆಯಲ್ಲೂ ಸ್ಥಾಪನೆಯಾಗಲಿ ಎಂದು ಶಾಸಕ ಹರೀಶ್‌ ಪೂಂಜ ವಿನಂತಿಸಿದರು. ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ದ.ಕ. ಜಿ.ಪಂ. ಸಹಯೋಗದಲ್ಲಿ ನಾರಾವಿಯಲ್ಲಿ ಜರಗಿದ ಅಳಿವಿನ ಅಂಚಿನಲ್ಲಿರುವ ಮೀನು ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಆವಾಸ ಸ್ಥಾನಗಳಿಗೆ ಬಿಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿನೂತನ ಯೋಜನೆಗಳ ಮೂಲಕ ಇಂದು ಇಲಾಖೆಗಳು ಮೀನುಗಳ ಸಂರಕ್ಷಣೆಗೆ ಉತ್ತೇಜನ ನೀಡಿದೆ.

Advertisement

ನದಿ ನೀರಿನ ಸ್ವಚ್ಛತೆಯನ್ನೂ ಕಾಪಾಡುವ ಉದ್ದೇಶ ಇದರಲ್ಲಿ ಅಡಗಿದೆ. ಜಲಪೂಜೆ  ಕಾರ್ಯಕ್ರಮದಂತೆ ಮತ್ಸ್ಯಗಳ ಸಂರಕ್ಷಿಸುವ ಕಾರ್ಯಕ್ರಮವೂ ಪ್ರತಿವರ್ಷವೂ ನಡೆಯಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳ ಒಟ್ಟು ಸೇರಿ ಇಂತಹ ವಿನೂತನ ಯೋಜನೆಗಳನ್ನು ಜಾರಿಗೆ ತಂದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದರು.

ಮಂಗಳೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಮಾತನಾಡಿ, ಪ್ರಕೃತಿಯ ಅಸಮತೋಲನ ತಡೆಗಟ್ಟಬೇಕಾದರೆ ಎಲ್ಲ ಜೀವರಾಶಿಗಳ ಉಳಿವು ಅಗತ್ಯ. ಆದರೆ ಇಂದು ನಾವು ಸ್ವಾರ್ಥ ಜೀವನಗೋಸ್ಕರ ಪ್ರಕೃತಿ, ಜೀವರಾಶಿಗಳನ್ನು ನಾಶ ಮಾಡುತ್ತಿದ್ದೇವೆ. ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳನ್ನು ಗುರುತಿಸಿ ಅದರ ಸಂತಾನೋತ್ಪತ್ತಿ ಮಾಡಿಸಿ ಪುನಃ ಅದರ ಮೂಲ ಆವಾಸ ಸ್ಥಾನಗಳಿಗೆ ಬಿಡಲು ಇಲಾಖೆಗಳು ಕೈಜೋಡಿಸಿವೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯ ಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಅನ್ನು ಈಗಾಗಲೇ  98 ಲಕ್ಷ ರೂ. ಅನುದಾನದಡಿ ಪಿಲಿಕುಳದಲ್ಲಿ ಸ್ಥಾಪಿಸಿ, 22 ಜಾತಿ ಮೀನುಗಳನ್ನು ಸಾಕಿ ಪ್ರವಾಸಿಗರ ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು.

ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ವಿ., ಮಂಗಳೂರು ಮೀನುಗಾರಿಕಾ ಇಲಾಖೆಯ ಸಹಾಯಕ ಯೋಜನಾ ನಿರ್ದೇಶಕಿ ಡಾ| ಸುಶ್ಮಿತಾ, ನಾರಾವಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋದಾ, ಸದಸ್ಯ ಉದಯ ಹೆಗ್ಡೆ, ಕುತ್ಲೂರು ಅರಣ್ಯ ಸಮಿತಿ ಅಧ್ಯಕ್ಷ ಶ್ರೀಧರ ಪೂಜಾರಿ, ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಕುಮಾರ್‌ ಪೈ ಸ್ವಾಗತಿಸಿ, ನಿರೂಪಿಸಿದರು.

ನದಿಗಳಿಗೆ ಮೀನು ಮರಿ
ಅಳಿವಿನ ಅಂಚಿನಲ್ಲಿರುವ ಕಿಜಾನ್‌, ಮಲಬಾರ್‌ ಡೈನೊ, ಚಂದ್ರಡಿಕೆ ಮೊದಲಾದ ಪ್ರಬೇಧಗಳ ಮೀನುಗಳ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮಘಟ್ಟದ ಮೂಲ ಆವಾಸ ಸ್ಥಾನಗಳಿಗೆ ಕೊಂಡೊಯ್ದು ಬಿಡಲಾಗುವುದು. ಇದೀಗ ವೇಣೂರು, ನಾರಾವಿ, ಅಳದಂಗಡಿ ಪರಿಸರದ ನದಿಗಳಿಗೆ ಮೀನು ಮರಿಗಳನ್ನು ಬಿಟ್ಟು ಸಂರಕ್ಷಣೆಗೆ ಚಾಲನೆ ನೀಡಲಾಗಿದೆ. 
– ಡಾ| ಎಂ.ಆರ್‌. ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next