ಬೆಳ್ತಂಗಡಿ: ರಾಜ್ಯ ಹೆದ್ದಾರಿ, ಪವಿತ್ರ ಧಾರ್ಮಿಕ ಕ್ಷೇತ್ರ ಸಹಿತ ಹಲವು ಪ್ರವಾಸಿ ತಾಣ ಹೊಂದಿರುವ ಬೆಳ್ತಂಗಡಿ ತಾಲೂಕಿನ ಗ್ರಾಮೀಣ, ಪಟ್ಟ ಣದ ಬೆಳವಣಿಗೆ ದೃಷ್ಟಿಯಿಂದ ರಾಜಕೀಯರಹಿತ ಅಭಿವೃದ್ಧಿಗೆ ಪಣತೊಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.
ಪೌರಾಡಳಿತ ಇಲಾಖೆಯ ನಗರಾ ಭಿವೃದ್ಧಿ ಯೋಜನೆಯಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 2.40 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
2.40 ಕೋ.ರೂ. ವೆಚ್ಚದ ಕಾಮಗಾರಿ ಸುದೆಮುಗೇರು ತಿರುವಿನಿಂದ ಕಿಟ್ಟಣ್ಣ ಶೆಟ್ಟಿ ಮನೆಯವರೆಗೆ ರಸ್ತೆ ಕಾಂಕ್ರೀಟ್ ಕಾಮ ಗಾರಿಗೆ 40 ಲ.ರೂ., ಮಟ್ಲ ಜೋಸೆಫ್ ಮನೆಯಿಂದ ಮಟ್ಲ ನಾರಾಯಣ ರಾವ್ ಮನೆವರೆಗಿನ ರಸ್ತೆ ಕಾಂಕ್ರೀಟ್‌ಗೆ 35 ಲ. ರೂ., ಕೆಲ್ಲಗುತ್ತು ರಸ್ತೆಯಿಂದ ಚರ್ಚ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 25 ಲ. ರೂ., ಕೆಲ್ಲಗುತ್ತು ಮೆಡ್ಯಲೋಟ್ಟು ರಸ್ತೆ ಕಾಂಕ್ರೀಟ್ ಕಾಮಗಾರಿಗೆ 50 ಲ. ರೂ.,ಜೈನ ಪೇಟೆ ಅರಫಾ ಸ್ಯಾನಿಟರಿ ಪಕ್ಕದ ರಸ್ತೆ ಕಾಂಕ್ರೀಟ್ ಕಾಮಗಾರಿ ಹಾಗೂ ಹಳ್ಳಕ್ಕೆ ತಡೆಗೋಡೆ 30 ಲ.ರೂ., ಗುಂಪಲಾಜೆ ಕೃಷ್ಣ ಭಟ್ ಮನೆಯಿಂದ ಮುಗುಳಿ ಛತ್ರ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 20 ಲ.ರೂ., ಕಂಚಿಂಜೆ ರುದ್ರೋಜಿಯವರ ಮನೆ ಎದುರು ರಸ್ತೆ ಅಭಿವೃದ್ಧಿಗೆ 15 ಲ.ರೂ. ಹಾಗೂ 25 ಲ.ರೂ. ವೆಚ್ಚದಲ್ಲಿ ಮಾರಿಗುಡಿ ಹಾಗೂ ಪೊಲೀಸ್ ಕ್ವಾಟ್ರಸ್ ಬಳಿ ಇಂಟರ್‌ಲಾಕ್ ಅಳವಡಿಕೆಗೆ ಶಿಲಾನ್ಯಾಸ ನಡೆಸಲಾಯಿತು.
ಪ. ಪಂ. ಸದಸ್ಯ ರಾದ ಜಯಾನಂದ ಗೌಡ, ಶರತ್ ಕುಮಾರ್ ಶೆಟ್ಟಿ, ರಜನಿ ಕುಡ್ವ, ಅಂಬರೀಶ್, ಲೋಕೇಶ್, ಜಗದೀಶ್ ಡಿ., ತುಳಸಿ, ಗೌರಿ, ಮುಖ್ಯಾಧಿ ಕಾರಿ ಸುಧಾಕರ್, ಎಂಜಿನಿಯರ್ ಮಹಾ ವೀರ ಆರಿಗ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಕೇಶವ ಮೊದಲಾದವರಿದ್ದರು.