Advertisement

“75′ಹರಿನಮನ: ಪುನರೂರು ಸೇವೆ ಅನುಕರಣೀಯ: ಡಾ|ಶೆಟ್ಟಿ

09:57 AM Sep 08, 2018 | |

ಮಂಗಳೂರು: ಎಲ್ಲ ರಂಗಗಳಲ್ಲಿಯೂ ಸಂಘಟಕರಾಗಿ, ಪ್ರವರ್ತಕ ರಾಗಿ, ಪ್ರೋತ್ಸಾಹಕರಾಗಿ ಹರಿಕೃಷ್ಣ ಪುನರೂರು ನೀಡುತ್ತಿರುವ ಸೇವೆ ಮತ್ತು ಕೊಡುಗೆ ಅನುಕರಣೀಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಶ್ಲಾಘಿಸಿದರು.

Advertisement

ಕದ್ರಿಯ ನೃತ್ಯ ಭಾರತಿ ವತಿಯಿಂದ ಶುಕ್ರವಾರ ಪುರಭವನದಲ್ಲಿ ಜರಗಿದ ಹರಿಕೃಷ್ಣ ಪುನರೂರು ಜನ್ಮ ಅಮೃತ ಮಹೋತ್ಸವ- 75 ಹರಿನಮನ ಎಂಬ ಹರಿಕೃಷ್ಣ ಪುನರೂರು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣಗೈದರು.

ಸಾಹಿತ್ಯ, ಲಲಿತಕಲೆಗಳು, ಉದ್ಯಮ, ಸಮಾಜಸೇವೆ, ದಾನ, ಧಾರ್ಮಿಕ, ಶಿಕ್ಷಣ ಸಹಿತ ಎಲ್ಲ ಕ್ಷೇತ್ರಗಳಿಗೂ ಪುನರೂರು ಅವರು ಕ್ರಿಯಾತ್ಮಕವಾಗಿ ಸ್ಪಂದಿಸುತ್ತಿ ದ್ದಾರೆಂದು ಮುಖ್ಯ ಅತಿಥಿಯಾಗಿದ್ದ ಆಳ್ವಾಸ್‌ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ಧರ್ಮಸ್ಥಳದ ಡಿ. ಹರ್ಷೇದ್ರ ಕುಮಾರ್‌ ಅವರು ಹರಿಕೃಷ್ಣ ಪುನ ರೂರು-ಉಷಾರಾಣಿ ದಂಪತಿಯನ್ನು ಸಮ್ಮಾನಿಸಿ ಶುಭ ಹಾರೈಸಿದರು.

ಸೇವಾಬದ್ಧತೆ: ಪುನರೂರು
ಸಮಾಜದ ಸರ್ವತೋಮುಖ ಏಳಿಗೆಯ ಸೇವಾಬದ್ಧತೆಯನ್ನು ಗುರುಹಿರಿಯರು, ಸ್ನೇಹಿತರ ಮಾರ್ಗದರ್ಶನ ದಿಂದ ರೂಢಿಸಿಕೊಂಡಿರುವುದಾಗಿ ಸಮ್ಮಾನ ಸ್ವೀಕರಿಸಿದ ಹರಿಕೃಷ್ಣ ಪುನರೂರು ಹೇಳಿದರು. ಶರವು ರಾಘವೇಂದ್ರ ಶಾಸಿŒ ಅಧ್ಯಕ್ಷತೆ
ವಹಿಸಿದ್ದರು. ಜಯಂತಿ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ ಭಟ್‌, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಶ್ರೀಪತಿ ಭಟ್‌ ಮೂಡಬಿದಿರೆ, ಲಕ್ಷ್ಮೀ ರಾವ್‌ ಆರೂರು, ಪ್ರಭಾ ಸುವರ್ಣ ಮುಂಬಯಿ ಅತಿಥಿಗಳಾಗಿದ್ದರು. ಶಾರದಾ ವಿದ್ಯಾಲಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಅಭಿನಂದನಾ ಭಾಷಣ ಮಾಡಿದರು. 

ನೃತ್ಯ ಭಾರತಿ ಸ್ಥಾಪಕಾಧ್ಯಕ್ಷೆ ವಿ| ಗೀತಾ ಸರಳಾಯ ಪ್ರಸ್ತಾವನೆಗೈದರು. ಸುಧಾಕರ ರಾವ್‌ ಪೇಜಾವರ ಸ್ವಾಗತಿಸಿ
ದರು. ವಿ| ರಶ್ಮಿ ಚಿದಾನಂದ್‌ ಸಮ್ಮಾನಪತ್ರ ವಾಚಿಸಿದರು. ವಿ| ರಮ್ಯಾಚಂದ್ರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next