Advertisement

ಪಾದುಕಾ ಪಟ್ಟಾಭಿಷೇಕ ಸಂಕೀರ್ತನಾಮೃತ

10:32 AM Jan 31, 2020 | mahesh |

ಮಂಗಳೂರಿನ ರಮಾ ಮಿಶನ್‌ನಲ್ಲಿ ಕಥಾ ಕೀರ್ತನಾ ರಂಗದ ಪ್ರತಿಭೆ ಮಂಜುಳಾ ಜಿ.ರಾವ್‌ ಇರಾ ಪಾದುಕಾ ಪಟ್ಟಾಭಿಷೇಕ ಸಂಕೀರ್ತನೆ ಯನ್ನು ಆಪ್ಯಾಯಮಾನ ವಾಗಿ ಮಂಡಿಸಿದರು.ಮಂಜುಳಾರಾವ್‌ ಶಂ ನ ಅಡಿಗ, ಭದ್ರಗಿರಿ ಅಚ್ಯುತದಾಸ್‌ ಮತ್ತು ಲಕ್ಷ್ಮಣದಾಸ ವೇಲಣ್‌ಕ‌ರ್‌ರವರ ಗುರುತ್ವದಲ್ಲಿ ಪಳಗಿದವರು. ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲೂ ನಿಪುಣರು.

Advertisement

ರಾಮ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟಾಗ ರಾಮನ ಸ್ವರ್ಣ ಪಾದುಕೆಗಳ ಪಟ್ಟಾಭಿಷೇಕವನ್ನು ಭರತನು ನಡೆಸುವ ಚಿತ್ರಣದ ಸಂಕೀರ್ತನೆ ಇದಾಗಿತ್ತು. ದೇವನನ್ನು ಜೀವ ಅನುಸರಿಸಬೇಕು ಎನ್ನುವ ಸಂದೇಶ ಹೊತ್ತ ಈ ಕಥಾಕೀರ್ತನೆಯನ್ನು ವಿದ್ವತ್‌ ಪೂರ್ಣವಾಗಿ ನಿರೂಪಿಸಿ ಕಾಲಕ್ಷೇಪವನ್ನು ಸಾರ್ಥಕ ಬದ್ಧಗೊಳಿಸಿದರು.

ನವರಸಗಳ‌ ಭಾವಕ್ಕೆ ತಕ್ಕಂತೆ ರಾಗ, ಪೂರಕ -ಪ್ರಸ್ತುತ ವಿದ್ಯಮಾನ, ವಿನೋದಾವಳಿಗಳನ್ನು ಕತೆ ಉಪಕತೆಗಳೊಂದಿಗೆ ಏಕೀಕೃತಗೊಳಿಸಿ ಸುಮಧುರ ಶಾರೀರದೊಂದಿಗೆ ಅಲೌಕಿಕವನ್ನು ಲೌಕಿಕತೆಯಲ್ಲಿ ಸಂಲಗ್ನಗೊಳಿಸಿ, ಸುಜ್ಞಾನದ ಬೆಸುಗೆಯಲ್ಲಿ ಹಾವ-ಭಾವ, ನಿರರ್ಗಳ ವಾಕ್‌ಝರಿಯೊಂದಿಗೆ ವ್ಯಾಖ್ಯಾನಿಸಿ ಪರವಶಗೊಳಿಸಿದರು. ಹಾರ್ಮೋನಿಯಂನಲ್ಲಿ ರಮೇಶ್‌ ಹೆಬ್ಟಾರ್‌ ಮತ್ತು ತಬ್ಲಾದಲ್ಲಿ ಪ್ರಕಾಶ್‌ ಸಪ್ರ ಸಾಥ್‌ ನೀಡಿದರು.

– ಸಂದೀಪ್‌ ನಾಯಕ್‌ ಸುಜೀರ್‌

Advertisement

Udayavani is now on Telegram. Click here to join our channel and stay updated with the latest news.

Next