Advertisement

ಚಿಂತನೆಗೆ ಗ್ರಾಸ ವಾದ ಹರಿಕಥಾ ಸಪ್ತಾಹ

06:09 PM Feb 21, 2020 | mahesh |

ಕಾರ್ಕಳ ಶ್ರೀ ಅನಂತಪದ್ಮನಾಭ ದೇಗುಲದಲ್ಲಿ ಹರಿಕಥಾ ಪರಿಷತ್ತು ಮಂಗಳೂರು ಹಾಗೂ ದೇವಳದ ಭಜಕವೃಂದಗಳ ಸಂಯುಕ್ತ ಆಶ್ರಯದಲ್ಲಿ ಐದನೇ ವರ್ಷದ ಭಾಗವತ ಹರಿಕಥಾ ಸಪ್ತಾಹವು ಜ.19 ರಿಂದ 25ರ ವರೆಗೆ ಹರಿದಾಸ ಟಿ.ಎಲ್‌. ವಾಸುದೇವ ರಾಯರ ವೇದಿಕೆಯಲ್ಲಿ ನಡೆಯಿತು.

Advertisement

ಆರಂಭದ ದಿನ ತುಮಕೂರಿನ ಮೋಹನದಾಸ್‌ ಅವರು “ಭಕ್ತ ಧ್ರುವ’ ಕಥಾನಕದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪೂರ್ವವಾದ ಕಂಠಸಿರಿಯಿಂದ ಹರಿಕಥಾಪ್ರಿಯರ ಮನಗೆದ್ದರು. ಸಾಂದರ್ಭಿಕವಾದ ಸಾಕಷ್ಟು ಉಪಕತೆಗಳು ಕಥಾಭಾಗಕ್ಕೆ ಪೂರಕವಾಗಿದ್ದವು.

ಎರಡನೇ ದಿನ ಹಿರಿಯ ಹರಿದಾಸರಾದ ಅಂಬಾತನಯ ಮುದ್ರಾಡಿ ಅವರು ಇಳಿವಯಸ್ಸಿನಲ್ಲೂ “ಭಕ್ತ ಪ್ರಹ್ಲಾದ’ ಕಥಾ ಪ್ರಸಂಗದ ಪೂರ್ವಾರ್ಧವನ್ನು ಅರ್ಥಗರ್ಭಿತವಾಗಿ ನಡೆಸಿಕೊಟ್ಟರು. ಉತ್ತರಾರ್ಧವನ್ನು ಶಿಷ್ಯ ಅನಂತಪದ್ಮನಾಭ ಭಟ್‌ ಅವರೊಂದಿಗೆ ಕೊನೆಯ ತನಕ ಕೂಡಿಕೊಂಡು ಸಮರ್ಥವಾಗಿ ನಡೆಸಿಕೊಟ್ಟರು.

ಮೂರನೇ ದಿನ ಶಂಕರನಾರಾಯಣ ಅಡಿಗ ಕುಂಬ್ಳೆ ಅವರ “ಗಜೇಂದ್ರ ಮೋಕ’ ಕಥಾನಕ ರೋಮಾಂಚನವನ್ನುಂಟು ಮಾಡಿತು. ಉತ್ತಮ ಕಂಠಸಿರಿ ಸಾಕಷ್ಟು ಉಪಕತೆಗಳ ಮೂಲಕ ಪ್ರಸಂಗಕ್ಕೆ ಮೆರುಗನ್ನು ನೀಡಿದರು. ಹರಿಕಥಾಪ್ರಿಯರ ಮೆಚ್ಚುಗೆ ಗಳಿಸಿದ ಪ್ರಸಂಗ ಇದಾಗಿತ್ತು.ನಾಲ್ಕನೇ ದಿನ ತೋನ್ಸೆ ಪುಷ್ಕಳ ಕುಮಾರ್‌ ಅವರು ನಡೆಸಿಕೊಟ್ಟ “ಶ್ಯಮಂತಕೋಪಾಖ್ಯಾನೆ’ ಕಥಾನಕ ಮಂತ್ರಮುಗ್ಧರನ್ನಾಗಿಸಿತು.

ಐದನೇ ದಿನ ಮುಂಬಯಿಯ ವಿಶ್ವೇಶದಾಸರು “ವಾಮನ ಚರಿತ್ರೆ’ ಕಥಾನಕವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಉಪಕತೆಗಳು ವಿರಳವಾಗಿದ್ದರೂ ಮುಖ್ಯ ಕತೆಗೆ ಪೂರಕವಾಗಿ ಸಾಕಷ್ಟು ಚಿಂತನೆಗಳನ್ನು ಹಂಚಿಕೊಂಡರು.

Advertisement

ಆರನೇ ದಿನ ದೇವಕಿತನಯ ಕೊಡ್ಲು ಅವರಿಂದ “ಶ್ರೀ ಕೃಷ್ಣ ಪರಂಧಾಮ’ ಎಂಬ ಹರಿಚಿಂತನೆಯು ಸೀಮಿತ ಅವಧಿಯೊಳಗೆ ಚುಟುಕಾಗಿ ನಿವೇದಿಸಲ್ಪಟ್ಟಿತು. ಉಪಕತೆಗಳು ವಿರಳವಾಗಿದ್ದರೂ ಪ್ರಸಂಗದ ಗಾಂಭೀರ್ಯತೆಯನ್ನು ಎತ್ತಿ ಹಿಡಿದು ಶ್ರೀಕೃಷ್ಣನ ಕೊನೆಯ ದಿನಗಳನ್ನು ಉಲ್ಲೇಖೀಸಿ ರಂಜಸಿದರು.

ಕೊನೆಯ ದಿನ ಮಂಜುಳಾ ಇರಾ ಅವರು “ಅಕ್ಷಯಾಂಬರ’ ಕಥಾನಕವನ್ನು ಅಪ್ರತಿಮ ವಾಗjರಿಯಿಂದ ಪ್ರಸ್ತುತಪಡಿಸಿ ರಂಜಿಸಿದರು. ಕಥಾನಾಯಕಿ ದ್ರೌಪದಿಯ ಸಂಪೂರ್ಣ ಚಿತ್ರಣವನ್ನು ಅನೇಕ ಉಪಕತೆಗಳ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟರು.

ಹಿಮ್ಮೇಳದಲ್ಲಿ ರಮೇಶ್‌ ಹೆಬ್ಟಾರ್‌, ನಾಗರಾಜ ಶೆಣೈ, ಸತ್ಯನಾರಾಯಣ ಐಲ, ರವಿರಾಜ್‌, ಪ್ರದೀಪ ಉಪಾಧ್ಯಾಯ, ವಿಘ್ನೇಶ್‌ ಪ್ರಭು, ವಾಸುದೇವ ಕಿಣಿ, ಮನೋಹರ ರಾವ್‌ ಸಹಕರಿಸಿದರು.

ಕೆ.ಕೆ. ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next