Advertisement

ಹರಿಹರನ್‌ಗೆ “ಆಳ್ವಾಸ್‌ ವಿರಾಸತ್‌-2019′ಪ್ರಶಸ್ತಿ

10:41 AM Dec 20, 2018 | Team Udayavani |

ಮೂಡುಬಿದಿರೆ: “ಆಳ್ವಾಸ್‌ ವಿರಾಸತ್‌-2019’ರ ಪ್ರಶಸ್ತಿಗೆ ಖ್ಯಾತ ಹಿನ್ನೆಲೆ ಗಾಯಕ, ಗಝಲ್‌ ಹಾಡುಗಾರ, ಫ್ಯೂಶನ್‌ ಸಂಗೀತ ಸಾಧಕ ಹರಿಹರನ್‌ ಅವರನ್ನು ಆರಿಸಲಾಗಿದೆ. ಪ್ರಶಸ್ತಿ 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

Advertisement

ತಿರುವನಂತಪುರದ ಹರಿಹರನ್‌ ಅನಂತ ಸುಬ್ರಮಣಿಯನ್‌ ಅವರು ಹರಿಹರನ್‌ ಎಂದೇ ಖ್ಯಾತರು. ಗಝಲ್‌, ಭಕ್ತಿಗೀತೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆ. ತಮಿಳು, ಹಿಂದಿ, ಮಲಯಾಳಂ, ಕನ್ನಡ, ಮರಾಠಿ, ಭೋಜ್‌ಪುರಿ ಮತ್ತು ತೆಲುಗು ಚಲನಚಿತ್ರ ರಂಗದ ಹಿನ್ನೆಲೆ ಗಾಯಕರಾಗಿ ಜನಮನ ಗೆದ್ದವರು.

30ಕ್ಕಿಂತಲೂ ಹೆಚ್ಚು ಗಝಲ್‌ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. 1996ರಲ್ಲಿ “ಕಲೋನಿಯಲ್‌ ಕಸಿನ್ಸ್‌’ ಆಲ್ಬಂನ್ನು ಲೆಸ್ಲೆ ಲೆವಿಸ್‌ ಅವರೊಂದಿಗೆ ತಯಾರಿಸಿ, ಫ್ಯೂಶನ್‌ ಸಂಗೀತ ಸಾಧಕರಾಗಿಯೂ ಹೊರಹೊಮ್ಮಿದ್ದಾರೆ.

ಬಾರ್ಡರ್‌ ಸಿನೆಮಾದ “ಮೇರೆ ದುಶ್ಮನ್‌ ಮೇರೆ ಭಾಯಿ’ ಹಾಗೂ ಅಜಯ್‌ ಅತುಲ್‌ ಸಂಯೋಜನೆಯ ಮರಾಠಿ ಚಿತ್ರ “ಜೋಗ್ವಾ’ದ “ಜೀವ್‌ ರಾಂಗ್ಳ’ ಹಾಡುಗಳಿಗೆ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. 2004ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ.

ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಜ.4ರಿಂದ 6ರ ವರೆಗೆ ಆಳ್ವಾಸ್‌ ವಿರಾಸತ್‌ ನಡೆಯಲಿದ್ದು ಜ. 4ರಂದು ವಿರಾಸತ್‌ ಪ್ರಶಸ್ತಿ ಪ್ರದಾನ ನಡೆಯಲಿದೆ. “ಆಳ್ವಾಸ್‌ ವಿರಾಸತ್‌’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಈಗ ರಜತ ಸಂಭ್ರಮ ಎಂದು ಡಾ| ಮೋಹನ ಆಳ್ವ ತಿಳಿಸಿದರು.

Advertisement

ಜ. 4ರಂದು ಹರಿಹರನ್‌ ಮತ್ತು ಲೆಸ್ಲೆ ಲಿವಿಸ್‌ ಅವರ ರಸಸಂಯೋಗ, ಜ. 5ರಂದು ಮುಂಬಯಿಯ ಸುಖೀÌಂದರ್‌ ಸಿಂಗ್‌ ಬಳಗದಿಂದ ಗಾನತರಂಗ, ಬೆಂಗಳೂರಿನ ತಂಡದಿಂದ ಒಡಿಸ್ಸಿ ನೃತ್ಯ, ಚೆನ್ನೈಯ ಶೈಲ ಸುಧಾ ಅಕಾಡೆಮಿಯವರಿಂದ ಕೂಚುಪುಡಿ, ಜ. 6ರಂದು ಹೈದರಾಬಾದ್‌ನ ಸೂರ್ಯಪ್ರಕಾಶ್‌ಗೆ ವರ್ಣವಿರಾಸತ್‌ ಪ್ರದರ್ಶನ, ಶಂಕರ್‌ ಮಹಾದೇವನ್‌ ಚಿತ್ರರಸಸಂಜೆ, ಪರಂಪರ ಕೋಲ್ಕತಾ ಭರತನಾಟ್ಯ ಇತ್ಯಾದಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next