Advertisement
ಪಕ್ಕೀಸ್ವಾಮಿ ಮಠದಿಂದ ಶಿವಮೊಗ್ಗ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ,ಗಂ ವೃತ್ತದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ರೆಹಾನ್ ಪಾಷಾಗೆ ಮನವಿ ನೀಡಿದರು. ನಂತರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಶೋಷಿತರ ಅಭಿವೃದ್ಧಿಗೆ ಸಂವಿಧಾನ ಎಸ್ಸಿ, ಎಸ್ಟಿಯಡಿ ಮೀಸಲಾತಿ ಕಲ್ಪಿಸಿದ್ದು, ಅಲೆಮಾರಿಗಳಾದ ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳನ್ನು ಎಸ್ಸಿ ಎಂದು ಪರಿಗಣಿಸಲಾಗಿದೆ. ಆದರೆ ಮೇಲ್ವರ್ಗದ ಕೆಲವು ಲಿಂಗಾಯಿತ ಜಂಗಮರು ಸಹ ಬೇಡ ಜಂಗಮರೆಂದು ಸುಳ್ಳು ಎಸ್ಸಿ ಪ್ರಮಾಣ ಪತ್ರ ಪಡೆದು ಶೋಷಿತ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೆ ಈ ಕುರಿತು ಎಲ್ಲಾ ತಹಶೀಲ್ದಾರರಿಗೂ ಸೂಕ್ತ ನಿರ್ದೇಶನ ನೀಡಿ ಇದನ್ನು ತಡೆಯಬೇಕು, ತಪ್ಪಿದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಡಿಎಸ್ ಎಸ್‌ನಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಸೇರಿದಂತೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಾಗೀಶ್ ಬನ್ನಿಕೋಡು, ಅಂಜನಪ್ಪ ನಿಟ್ಟೂರು, ಅಣ್ಣಪ್ಪ ಕುಣೆಬೆಳೆಕೆರೆ,ಹರಳಯ್ಯ, ಭರತ್ ಎಸ್.ಪಿ., ಕಿರಣ್ ಬಿ., ರವಿ ಬಿ., ನವೀನ್ ಎನ್.ಟಿ., ಶಿವರಾಜ್, ಪರಶುರಾಮ್, ಮಧು ಎನ್.ಪಿ., ಹರೀಶ್ ಬಿ.ಎಚ್., ಹಾಲೇಶ್, ರಾಜಪ್ಪ ಇತರರಿದ್ದರು.