Advertisement

ವಾಲ್ಮೀಕಿ ಶ್ರೀಗಳ ಪರಿಸರ ಪ್ರೇಮ ಪ್ರಸಂಶನೀಯ: ಬೈರತಿ

11:39 AM Jun 10, 2020 | Naveen |

ಹರಿಹರ: ಮಠದ ಅವರಣ ಮಾತ್ರವಲ್ಲದೆ ಮಠಕ್ಕೆ ಸಾಗುವ 3 ಕಿಮೀ ರಸ್ತೆಯ ಇಕ್ಕೆಲಗಳಲ್ಲೂ ಗಿಡಗಳನ್ನು ನೆಡುತ್ತಿರುವ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಗಳ ಪರಿಸರ ಪ್ರೇಮ ಪ್ರಶಂಸನೀಯ ಎಂದು ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಹೇಳಿದರು.

Advertisement

ಗುರುಪೀಠದ ಆವರಣದಲ್ಲಿ ಮಂಗಳವಾರ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಮಠಗಳು ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳೊಂದಿಗೆ ಪರಿಸರ ಸಂರಕ್ಷಣೆಯಲ್ಲೂ ತೊಡಗಿಸಿಕೊಂಡಿವೆ ಎಂದರು. ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಮಠದ ಅವರಣದಲ್ಲಿ ಮಹಾಘನಿ, ಹೊಂಗೆ, ಹಲಸು, ಹರಳೆ, ಆಲ, ಬಸರಿ, ಚಳ್ಳೆ, ಗುಲ್‌ಮೊಹರ್‌, ಕಾಡು ಬಾದಾಮಿ, ಗೋಣಿ, ಹೊಳೆ ಮತ್ತೆ, ನೆರಳೆ ಸೇರಿದಂತೆ 700ಕ್ಕೂ ಹೆಚ್ಚು ಸಸಿಗಳನ್ನು ಅಲ್ಲದೆ ಬೈಪಾಸ್‌ ರಸ್ತೆಯಿಂದ ಮಠದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಸಸಿಗಳನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನೆಡಲಾಗುತ್ತಿದೆ. ಈ ಸಸಿಗಳನ್ನು ಅರಣ್ಯ ಇಲಾಖೆ ಮುಂದಿನ ಮೂರು ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅರಣ್ಯ ಇಲಾಖೆಯಿಂದ ಶ್ರೀಗಂಧ, ನುಗ್ಗೆ, ನಿಂಬೆ, ಸೀತಾಪಲ, ಬೇಲಾ, ಸಿಹಿಹುಣಸೆ ಮತ್ತಿತರೆ ಸಸಿಗಳನ್ನು ವಿತರಿಸಲಾಯಿತು. ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಕನಕ ಪೀಠದ ನಿರಂಜನಾನಂದಪುರಿ ಶ್ರೀ, ಹೊಸಹಳ್ಳಿ ವೇಮನ ಪೀಠದ ವೇಮನಾನಂದ ಶ್ರೀ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ, ಡಾ| ಬಸವ ಮರುಳಸಿದ್ದ ಶ್ರೀ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಶ್ರೀ, ಮಡಿವಾಳ ಪೀಠದ ಬಸವ ಮಾಚಿದೇವ ಶ್ರೀ, ಜೇವರ್ಗಿ ಮಠದ ಸಿದ್ಧಬಸವ ಕಬೀರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಎಎಸ್‌ಪಿ ರಾಜೀವ್‌, ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ, ಜಿಪಂ ಉಪಕಾರ್ಯದರ್ಶಿ ಆನಂದ್‌, ದೂಡಾ ಆಯುಕ್ತ ಕೆ.ಟಿ. ಕುಮಾರಸ್ವಾಮಿ, ವಲಯ ಅರಣ್ಯಾಧಿಕಾರಿ ಆರ್‌. ಚೇತನ್‌, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಶಿವಪ್ರಸಾದ್‌, ಪಿಎಸ್‌ಐ ರವಿಕುಮಾರ್‌. ಕೆ.ಬಿ. ಮಂಜುನಾಥ್‌, ನಾಗರಾಜ್‌, ಮಾರುತಿ ಬೇಡರ್‌, ದಿನೇಶ್‌ ಬಾಬು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next