Advertisement

ನದಿ-ಗೋವುಗಳ ಸಂರಕ್ಷಣೆಗೆ ಕಠಿಣ ಕಾನೂನು ಅಗತ್ಯ: ಉಜ್ಜಯಿನಿ ಶ್ರೀ

05:20 PM Mar 06, 2020 | Naveen |

ಹರಿಹರ: ದೇಶದಲ್ಲಿನ ನದಿಗಳು ಹಾಗೂ ಗೋವುಗಳ ಸಂರಕ್ಷಣೆಗೆ ಕಠಿಣ ಕಾನೂನುಗಳು ಅಗತ್ಯ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ಸಮೀಪದ ಕೊಡಿಯಾಲ ಹೊಸಪೇಟೆಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ಪುಣ್ಯಕೋಟಿ ಮಠದಿಂದ ಆಯೋಜಿಸಿದ್ದ “ಪ್ರಥಮ ತುಂಗಾರತಿ’ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಾಗರಿಕತೆ, ಸಂಸ್ಕೃತಿಗಳ ಉಗಮ ಸ್ಥಾನಗಳಾದ ನದಿಗಳು ಹಾಗೂ ನಾಗರಿಕತೆಯ ಆರಂಭದಿಂದಲೂ ಮಾನವರಿಗೆ ಉಪಕಾರಿಯಾಗಿ ಸಾಗಿ ಬಂದಿರುವ ಅಪರೂಪದ ಪ್ರಾಣಿ ಗೋವು ಅಪಾಯದ ಅಂಚಿನಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಮನುಷ್ಯನ ಅತಿಯಾಸೆ ನದಿಗಳ ಅಳಿವಿಗೆ ಕಾರಣವಾಗುತ್ತಿದೆ. ಜಲಮೂಲ, ಅರಣ್ಯಗಳಿದ್ದರೆ ನಮ್ಮ ಉಳಿವು ಅಸಾಧ್ಯವೆಂಬ ಸರಳ ಸೂತ್ರ ಅರಿಯುವ ಸಮಾಧಾನವಿಲ್ಲವಾಗಿದೆ. ನಿಸ್ವಾರ್ಥಿಯಾದ ಪ್ರಕೃತಿಯು ಮನುಷ್ಯನಿಗೆ ಏನೆಲ್ಲಾ ನೀಡುತ್ತದೆ. ಆದರೆ ಬುದ್ಧಿಜೀವಿಯಾದ ಮನುಷ್ಯ ಅದೇ ಪ್ರಕೃತಿಯನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿದ್ದಾನೆ ಎಂದರು.

ಗೋವು ಕೂಡ ಮನುಷ್ಯನ ಆರೋಗ್ಯ ಸಂವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗೋವಿನ ಹಾಲಿಗೆ ತಾಯಿ ಹಾಲು ನಂತರದ ಸ್ಥಾನವಿದೆ. ಗೋಮೂತ್ರ, ಸೆಗಣಿಯಿಂದ ಅನೇಕ ಔಷಧಿ ತಯಾರಿಸಲಾಗುತ್ತದೆ. ಇರುವ ಕಾನೂನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಜೀವನದಿಗಳು ಹಾಗೂ ಗೋವಿನ ಸಂರಕ್ಷಣೆ ಮಾಡಬೇಕಿದೆ ಎಂದರು.

ಉತ್ತರ ಭಾರತದಲ್ಲಿ ಆಚರಿಸುವ ಗಂಗಾರತಿಗೆ ಇತಿಹಾಸ-ಪರಂಪರೆ ಇದೆ. ಅದೇ ರೀತಿ ದಕ್ಷಿಣದಲ್ಲಿ ತುಂಗಾರತಿ ಆರಂಭಿಸಿರುವುದು ಶ್ಲಾಘನೀಯ. ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ ಈ ಪರಂಪರೆಯನ್ನು ಮುಂದುವರಿಸಬೇಕೆಂದು ಹೇಳಿದರು.

Advertisement

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ಜಗದೀಶ್ವರ ಶ್ರೀಗಳು ಆರಂಭಿಸಿರುವ ತುಂಗಾರತಿ ಸಮಯೋಚಿತವಾಗಿದೆ. ಜಿಲ್ಲೆಯ ಜೀವನದಿ ಎನಿಸಿದ ತುಂಗಭದ್ರೆಯ ಸಂರಕ್ಷಣೆಗೆ ಈ ಆರತಿ ಕಾರ್ಯಕ್ರಮ ಜನಜಾಗೃತಿ ಮೂಡಿಸಲಿದೆ ಎಂದರು. ಧರ್ಮ, ಸಂಸ್ಕೃತಿ, ಪೂಜಾ ವಿಧಿ, ವಿಧಾನ, ಸಂಪ್ರದಾಯ ಅರಿತವರು ಮಠಾಧಿಧೀಶರಾಗುವುದು ಸೂಕ್ತ. ಆದರೆ ಕೆಲವು ಮಠಾ ಧೀಶರು ಧರ್ಮದ ಮೂಲಾಂಶಗಳನ್ನು ಅರಿಯದಿರುವುದು ಬೇಸರದ ಸಂಗತಿ. ಪರಿಣಾಮವಾಗಿ ಅಂತಹವರು  ನಾಚಾರದಿಂದ ನಡೆದುಕೊಳ್ಳುತ್ತಿದ್ದಾರೆ ಆರೋಪಿಸಿದರು. ಇದಕ್ಕೂ ಮುನ್ನ ನದಿಯ ದಡದಲ್ಲಿ ರಾಣೆಬೆನ್ನೂರಿನ ಶನೇಶ್ವರ ದೇವಾಲಯದ ಅರ್ಚಕರ ತಂಡದಿಂದ ತುಂಗಾರತಿ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ಪ್ರಥಮ ತುಂಗಾರತಿ ನೋಡಿ ಕಣ್ತುಂಬಿಕೊಂಡರು.

ಕಾಡಸಿದ್ದೇಶ್ವರಮಠದ ಡಾ|ಕರಿವೃಷಭ ಶ್ರೀ, ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶ್ರೀ, ಮುಕ್ತಿಮಠದ  ಶಿವಸಿದ್ಧ ಸೋಮೇಶ್ವರ ಶ್ರೀ, ಆವರಗೊಳ್ಳದ ಓಂಕಾರೇಶ್ವರ ಶಿವಾಚಾರ್ಯ ಶ್ರೀ,
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀ, ಬೇಬಿಮಠದ ತ್ರಿನೇತ್ರ ಮಹಾಂತ ಶ್ರೀ, ಬಂಕಾಪುರದ ರೇವಣಸಿದ್ದೇಶ್ವರ ಶ್ರೀ, ಸಿಂಧನೂರಿನ ಸೋಮನಾಥ ಶ್ರೀ, ಹಾವೇರಿಯ ಚನ್ನರುದ್ರ ಮಲ್ಲಿಕಾರ್ಜುನ ಶ್ರೀ, ಅಕ್ಕಿಆಲೂರಿನ ಚಂದ್ರಶೇಖರ ಶ್ರೀ, ಕುವೆಂಪು ವಿವಿ ಕುಲಪತಿ ಬಿ.ಪಿ.ವೀರಭದ್ರಪ್ಪ, ಕಾಂಗ್ರೆಸ್‌ ಮುಖಂಡ ಪ್ರಕಾಶ್‌ ಕೋಳಿವಾಡ, ಹಳೆ ಹರ್ಲಾಪುರ ಸ್ತ್ರೀಶಕ್ತಿ ಸಂಘದ ಡಾ| ಶಶಿಕುಮಾರ್‌ ಮೆಹರವಾಡೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next