Advertisement

ಕೊಳಚೆ ಪ್ರದೇಶ ನಿವಾಸಿಗಳ ಗಂಟಲು ದ್ರವ ಸಂಗ್ರಹ

06:48 PM Jul 01, 2020 | Naveen |

ಹರಿಹರ: ನಗರದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಇರುವ ವಿವಿಧ ಕೊಳಚೆ ಪ್ರದೇಶಗಳ ನಿವಾಸಿಗಳ ಗಂಟಲು ದ್ರಾವಣ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇಲ್ಲಿನ ಬೆಂಕಿ ನಗರ, ಇಂದಿರಾನಗರಗಳಲ್ಲಿರುವ ಕೊಳಚೆ ಪ್ರದೇಶದ ಮಂಗಳವಾರ 55 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಮಕ್ಕಳು ಹಾಗೂ ಕಾಯಿಲೆ ಪೀಡಿತರ ಗಂಟಲು ದ್ರವವನ್ನು ಸಂಗ್ರಹಿಸಲಾಯಿತು.

Advertisement

ಬೆಳಿಗ್ಗೆ ಎರಡೂ ಬಡಾವಣೆಗಳ ಬೀದಿಗಳಿಗೆ ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಣೆ ಮಾಡಿ, ನಂತರ ದ್ರವ ಸಂಗ್ರಹಣೆ ಕಾರ್ಯ ನಡೆಸಲಾಯಿತು. ಮಂಗಳವಾರ ಸುಮಾರು ನೂರಕ್ಕೂ ಹೆಚ್ಚು ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಬುಧವಾರವೂ ಕಾರ್ಯ ಮುಂದುವರಿಯಲಿದೆ ಎಂದು ಕಿರಿಯ ಪ್ರಯೋಗಾಲಯ ತಜ್ಞ ವಿ.ಆರ್‌. ಸಂತೋಷ್‌ಕುಮಾರ್‌ ಮಾಹಿತಿ ನೀಡಿದ್ದಾರೆ.

ನಗರಸಭೆ ಸದಸ್ಯೆ ಶಾಹಿನಾ ದಾದಾ ಪೀರ್‌, ಮುಖಂಡರಾದ ಶಫಿವುಲ್ಲಾ, ದಾದಾಪೀರ್‌ ಭಾನುವಳ್ಳಿ, ನಗರಸಭೆಯ ಆರೋಗ್ಯ ನಿರೀಕ್ಷಕ ಸಂತೋಷ್‌ ನಾಯಕ್‌, ಸಿಬ್ಬಂದಿ ಪರಸಪ್ಪ, ಬಿ.ಎನ್‌. ಮಂಜುನಾಥ್‌, ಹಳೇ ಕಚೇರಿ ಬಸವರಾಜ್‌, ಮಲ್ಲಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next