Advertisement
ನಗರದ ಡಿಆರ್‌ಎಂ ಕಾಲೇಜು ಆವರಣದಿಂದ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು, ಪ್ರಮುಖ ರಸ್ತೆಗಳ ಮೂಲಕ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಸಂಚಾರ ನಿಯಂತ್ರಕರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗದಿದ್ದಾಗ ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
Related Articles
Advertisement
ಈ ಗ್ರಾಮಗಳ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ಶಾಲಾ, ಕಾಲೇಜುಗಳಿಗೆ ತಡವಾಗಿ ತಲುಪುತ್ತಿದ್ದಾರೆ. ತಡವಾಗಿ ಬರುವವರಿಗೆ ತರಗತಿಗೆ ಬಿಟ್ಟುಕೊಳ್ಳುತ್ತಿಲ್ಲ. ಪರಿಣಾಮವಾಗಿ ಇವರ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದೆ.
ಬಸ್ ಪಾಸ್‌ಗಳಿಗೆ ಎಸ್ಸಿ, ಎಸ್ಟಿ ವರ್ಗದವರನ್ನು ಬಿಟ್ಟು ಉಳಿದ ವಿದ್ಯಾರ್ಥಿಗಳು ಹಣ ನೀಡುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ ಉಳಿದ ಹಣವನ್ನು ಸರಕಾರ ಸಾರಿಗೆ ಸಂಸ್ಥೆಗೆ ಅನುದಾನ ನೀಡುತ್ತದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಹಣವನ್ನು ಸರಕಾರವೇ ಭರಿಸುತ್ತದೆ. ಆದರೂ ಸಾರಿಗೆ ಸಂಸ್ಥೆ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಎರಡನೆ ದರ್ಜೆ ಪ್ರಜೆಗಳಂತೆ ವ್ಯವಹರಿಸುತ್ತಿದೆ.
ಈ ಮಾರ್ಗದಲ್ಲಿ ನಿಯಮಿತವಾಗಿ ಬಸ್ ಸಂಚಾರ ಆರಂಭಿಸಿದರೆ ವಿದ್ಯಾರ್ಥಿಗಳ ಜೊತೆಗೆ ಹತ್ತಾರು ಗ್ರಾಮಗಳ ಜನತೆಗೂ ಅನುಕೂಲವಾಗುತ್ತದೆ. ಸಾರಿಗೆ ಸಂಸ್ಥೆಗೂ ಆದಾಯ ಬರುತ್ತದೆ. ಆದಾಯ ಹೆಚ್ಚಿಸುವತ್ತ ಚಿತ್ತ ಹರಿಸದ ಸ್ಥಳೀಯ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಸ್ಥೆಗೆ ಆರ್ಥಿಕ ನಷ್ಟವೂ ಆಗುತ್ತಿದೆ ಎಂದರು.
ಡಿಪೋ ಮ್ಯಾನೇಜರ್ ಪರಮೇಶ್ವರಪ್ಪ, ರಾಣೆಬೆನ್ನೂರು ಕಡೆಯಿಂದ ಬರುವ ಎರಡು ಬಸ್‌ಗಳನ್ನು ಕುಮಾರಪಟ್ಟಣಂನಿಂದ ಬೈಪಾಸ್ ಮೂಲಕ ಸಂಚರಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದರಾದರೂ, ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ರಾಣೆಬೆನ್ನೂರು ಡಿಪೋ ಬದಲು ಹರಿಹರ ಡಿಪೋಗೆ ಸೇರಿದ ಬಸ್‌ಗಳನ್ನು ಈ ಮಾರ್ಗದಲ್ಲಿ ಪ್ರತಿ ದಿನ ಬೆಳಿಗ್ಗೆ 9, ಮಧ್ಯಾಹ್ನ 1, ಸಂಜೆ 4 ಮತ್ತು 6ಕ್ಕೆ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು. ಒಂದು ವಾರದಲ್ಲಿ ಈ ಸೌಲಭ್ಯ ಕಲ್ಪಿಸದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಪ್ರತಿಭಟನೆಯಿಂದಾಗಿ ನಿಲ್ದಾಣಕ್ಕೆ ಬಂದು ಹೋಗುವ ಬಸ್ ಹಾಗೂ ಪ್ರಯಾಣಿಕರಿಗೆ ಕೆಲ ಕಾಲ ತೊಂದರೆಯಾಯಿತು. ಎಬಿವಿಪಿ ಮುಖಂಡರಾದ ಶುಭಾಷ್, ಶಿವಕುಮಾರ್, ಚೇತನ್, ವಿದ್ಯಾಧರ, ವಿನುತಾ, ಸ್ವಾತಿ, ರಂಗನಾಥ ಇತರರಿದ್ದರು.