Advertisement

ಶಾಲೆಯ ಪರವಾನಗಿ ನವೀಕರಣಕ್ಕೆ ಲಂಚ: ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ

05:53 PM Dec 29, 2022 | Team Udayavani |

ದಾವಣಗೆರೆ: ಖಾಸಗಿ‌ ಶಾಲೆಯ ಪರವಾನಗಿ ನವೀಕರಣ ಕ್ಕೆ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಗುರುವಾರ ಹರಿಹರ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಖಾಸಗಿ ಶಾಲೆಯ ಪರವಾನಗಿ ನವೀಕರಣ ಮಾಡಿಕೊಡಲುಹರಿಹರದ ವಿದ್ಯಾದಾಹಿನಿ ಶಾಲೆಯ ಮುಖ್ಯಸ್ಥ ರಘುನಾಥ್ ಅವರಿಂದ ಸಿದ್ದಪ್ಪ ಒಟ್ಟು ಐವತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿಂದೆ ಹತ್ತು ಸಾವಿರ ಪಡೆದಿದ್ದರು. ಗುರುವಾರ 15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ಹಾಗೂ ರಾಷ್ಟ್ರಪತಿ ಇತರೆ ಸಿಬ್ಬಂದಿ ದಾಳಿ ನಡೆಸಿ ಸಿದ್ದಪ್ಪ ಅವರನ್ನ ವಶಕ್ಕೆ ಪಡೆದರು.

ಇದನ್ನೂ ಓದಿ: ರಾಕ್ಷಸರ ವಿಕೃತಿ ; ಪಾಕಿಸ್ಥಾನದಲ್ಲಿ ಹಿಂದೂ ಮಹಿಳೆಯ ಗ್ಯಾಂಗ್ ರೇಪ್ ಮಾಡಿ ಶಿರಚ್ಛೇದ

Advertisement

Udayavani is now on Telegram. Click here to join our channel and stay updated with the latest news.

Next