Advertisement

ಕೋವಿಡ್ ಕಡೆಗಣಿಸಿದರೆ ಅಪಾಯ

11:27 AM May 21, 2020 | Naveen |

ಹರಿಹರ: ಕೋವಿಡ್ ಕಡೆಗಣಿಸಿದರೆ ಅಪಾಯ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಎಚ್ಚರಿಸಿದರು.

Advertisement

10ನೇ ವಾರ್ಡ್‌ನ ಗಾಂಧಿನಗರದಲ್ಲಿ ಬುಧವಾರ ನಗರಸಭಾ ಸದಸ್ಯ ಎಂ. ಮುಜಮ್ಮಿಲ್‌ ಬಿಲ್ಲು ಯೋಜಿಸಿದ್ದ ಆಹಾರ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚೀನಾದ ವುಹಾನ್‌ನಿಂದ ದಾವಣಗೆರೆವರೆಗೆ ಬಂದಿರುವ ಈ ಕಾಯಿಲೆ ಇತರೆಡೆಗೂ ಹರಡುವುದು ತಡವಾಗುವುದಿಲ್ಲ ಎಂದರು.  ಜಾಲಿನಗರದಲ್ಲಿ ಓರ್ವ ವ್ಯಕ್ತಿಯಲ್ಲಿ ಕಂಡು ಬಂದ ಕೋವಿಡ್, ಆತನಿಂದ ನೆರೆಹೊರೆಯ 30 ಜನರಿಗೆ ಅಂಟಿದೆ ಎಂದರೆ ಇದರ ಅಪಾಯವನ್ನು ಅಂದಾಜಿಸಬಹುದು. ದಾವಣಗೆರೆಯಲ್ಲಿ ಹೆಚ್ಚು ಪ್ರಕರಣಗಳಿದ್ದರೂ ಹರಿಹರದಲ್ಲಿ ಒಂದೂ ಪ್ರಕರಣ ಇಲ್ಲದಿರುವುದಕ್ಕೆ ಇಲ್ಲಿನ ಜನರ ಮುಂಜಾಗ್ರತೆಯೇ ಕಾರಣ ಎಂದರು.

ನಗರಸಭಾ ಸದಸ್ಯ ಮುಜಮ್ಮಿಲ್‌ ಬಿಲ್ಲು ಮಾತನಾಡಿ, ಇದುವರೆಗೆ 500 ಜನ ಬಡ ಫಲಾನುಭವಿಗಳ ಪಟ್ಟಿ ಮಾಡಿದ್ದು ಅವರೆಲ್ಲರಿಗೂ ಕಿಟ್‌ ವಿತರಣೆ ಮಾಡಲಾಗುವುದೆಂದರು. ಎಸ್ಪಿ ಹನುಮಂತರಾಯ ಹಾಗೂ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿದರು. ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್‌. ಲಕ್ಷ್ಮೀ, ಎಇಇ ಎಸ್‌.ಎಸ್‌. ಬಿರಾದಾರ್‌, ನಗರಸಭಾ ಸದಸ್ಯ ಪಿ.ಎನ್‌. ವಿರುಪಾಕ್ಷಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next