Advertisement
ಶನಿವಾರ ಬೆಳಗ್ಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ದೇವಾಲಯದ ಮುಖ್ಯ ದ್ವಾರ ಬಾಗಿಲು ಮುಚ್ಚಿ ಬೀಗ ಹಾಕಿದರು. ಇಂದಿನಿಂದ ಭಕ್ತರಿಗೆ ಪ್ರವೇಶ ನಿರ್ಬಂ ಸಲಾಗಿದ್ದು, ಅರ್ಚಕರು ಮಾತ್ರ ಎಂದಿನಂತೆ ಸ್ವಾಮಿಗೆ ನಿತ್ಯ ಪೂಜಾ ಕಾರ್ಯ ನೆರವೇರಿಸುತ್ತಾರೆ. ಸರ್ಕಾರದ ಮುಂದಿನ ಆದೇಶದವರಗೆ ಭಕ್ತರು ಸೇರಿದಂತೆ ಸಾರ್ವಜನಿಕ ಪ್ರವೇಶ ನಿಷೇ ಧಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಕೆಲ ಹೊತ್ತು ಕುಳಿತು ಕಾಲ ಕಳೆದು ತೆರಳುವುದು ಮಾರಕ ಕೊರೊನಾ ವೈರಸ್ ಸೋಂಕು ಹರಡಬಹುದೆಂದು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬಟ್ಟೆ ಅಂಗಡಿ ಬಂದ್: ಬೆಳಗ್ಗೆ ನಗರದಲ್ಲಿ ಸಂಚರಿಸಿದ ನಗರಸಭೆ ಅಧಿಕಾರಿಗಳು ಮುಂಬರುವ ಯುಗಾದಿ ಹಬ್ಬದ ನಿಮಿತ್ತ ಬಟ್ಟೆ ಅಂಗಡಿಗಳು ಗ್ರಾಹಕರ ದಟ್ಟಣೆಯಿಂದ ಕೂಡುವ ಸಾಧ್ಯತೆಯಿದ್ದು, ಇದರಿಂದ ಕೊರೊನಾ ವೈರಸ್ ಹರಡಲು ಅವಕಾಶವಾಗುತ್ತದೆ ಎಂದು ಬಟ್ಟೆ ಅಂಗಡಿ ಬಂದ್ ಮಾಡಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಅಂಗಡಿ ಬಂದ್ ಮಾಡುವಂತೆ ಮಾಲೀಕರಿಗೆ ತಾಕೀತು ಮಾಡಿದರು.
Related Articles
Advertisement
ಭಾನುವಾರದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆಂದು ಬಂದ ಜನರಿಂದ ಮಾರುಕಟ್ಟೆ ತುಂಬಿದ್ದರಿಂದ ವ್ಯಾಪಾರದಾಸೆಗೆ ಪೂರ್ತಿ ಬಾಗಿಲು ತೆರೆದು ಕೆಲವು ಬಟ್ಟೆ ಅಂಗಡಿ ಮಾಲೀಕರು ಜಿಲ್ಲಾ ಕಾರಿ ಆದೇಶವನ್ನು ಗಾಳಿಗೆ ತೂರಿದರು.
ಸ್ವಚ್ಚತೆ ಕಾಪಾಡಲು ಸ್ಥಳೀಯರ ಆಗ್ರಹ: ದೇವಸ್ಥಾನ ಪ್ರವೇಶಿಸದಂತೆ ಸಾರ್ವಜನಿಕರಗೆ ನಿಷೇಧವನ್ನೇನೋ ಹೇರಲಾಗಿದೆ. ಆದರೆ ದೇವಸ್ಥಾನದ ಆವರಣದ ಎಲ್ಲೆಂದರಲ್ಲಿ ಕಸ ತುಂಬಿ ತುಳುಕುತ್ತಿದ್ದು, ಸ್ವಚ್ಚತೆ ಕಾಪಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ದೇವಸ್ಥಾನದ ಪಕ್ಕದಲ್ಲಿರುವ ಬಿರ್ಲಾ ಕಲ್ಯಾಣ ಮಂಟಪದ ಮುಂಭಾಗದ ಮೂಲೆಯಲ್ಲಿ ಪ್ರತಿದಿನ ಕಸದ ರಾಶಿ ಬಿದ್ದಿರುತ್ತದೆ.
ತ್ಯಾಜ್ಯದ ಜತೆಗೆ ಊಟಮಾಡಿದ ಎಲೆಗಳನ್ನು ಇಲ್ಲಿ ತಂದು ಹಾಕಲಾಗುತ್ತಿದೆ. ಆ ಎಲೆಗಳು ಗಾಳಿಗೆ ಎಲ್ಲೆಂದರಲ್ಲಿ ಹೋಗಿ ಬೀಳುತ್ತಿವೆ. ಒಂದು ಕಸದ ಡಬ್ಬಿಯನ್ನಾದರೂ ಇಲ್ಲಿ ಇಟ್ಟಿದ್ದರೆ ನೈರ್ಮಲ್ಯ ಕಾಪಾಡಬಹುದಾಗಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.