Advertisement
ದೊಗ್ಗಳ್ಳಿ ಗ್ರಾಮದ ಶಿರಡಿ ಶ್ರೀ ಹಾಲಿನ ಡೇರಿ ಸಮೀಪದ ಕೋಳಿ ಫಾರಂನಲ್ಲಿನ ಬುಧವಾರ ಸಂಜೆಯಿಂದ ರಾತ್ರಿಯೊಳಗೆ 4-5 ತಾಸುಗಳ ಅವಧಿಯಲ್ಲಿ ಅಂದಾಜು 30 ಕೋಳಿಗಳು ಸತ್ತು ನೆಲಕ್ಕುರಳಿದವು. ವಿಷಯ ತಿಳಿಯುತ್ತಿದ್ದಂತೆ ಗುರುವಾರ ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Related Articles
Advertisement
ಬನ್ನಿಕೋಡು-ಮುಂದುವರಿದ ಕಲ್ಲಿಂಗ್ಬನ್ನಿಕೋಡು ಗ್ರಾಮದಲ್ಲಿ ಬುಧವಾರದಿಂದ ಆರಂಭವಾಗಿರುವ ವೈಜ್ಞಾನಿಕ ರೀತಿಯ ಕೋಳಿ ಸಂಹಾರ ಮಾಡುವ ಕಲ್ಲಿಂಗ್ ಆಪರೇಷನ್ ಗುರುವಾರವೂ ಸಹ ಮುಂದುವರಿಯಿತು. ಎರಡನೆ ದಿನ 500ಕ್ಕೂ ಹೆಚ್ಚು ಕೋಳಿಗಳನ್ನು ಹಿಡಿದು ಸಾಯಿಸಿ, ಗ್ರಾಮ ಹೊರವಲಯದ ಕೆರೆ ದಂಡೆಯಲ್ಲಿ 2 ಮೀಟರ್ ಉದ್ದ, 2 ಮೀಟರ್ ಅಗಲ ಮತ್ತು 2 ಮೀಟರ್ ಆಳದ ಗುಂಡಿ ತೆಗೆದು ಹೂಳಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೆಶಕ ಡಾ|ನಂದಾ ತಿಳಿಸಿದ್ದಾರೆ. ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ನಾಯ್ಕ ನೇತೃತ್ವದ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ ಕೋಳಿ, ಹಕ್ಕಿ-ಪಕ್ಷಿಗಳನ್ನು ಸಾಯಿಸುವ ಕಾರ್ಯಾಚರಣೆ ನಡೆಸಿದೆ. ಗ್ರಾಮದಲ್ಲಿ 1600ಕ್ಕೂ ಹೆಚ್ಚು ಕೋಳಿಗಳಿವೆ
ಎಂದು ಅಂದಾಜಿಸಲಾಗಿದ್ದು, ಮೊದಲ ದಿನ 332 ಕೋಳಿಗಳನ್ನು ಸಂಹರಿಸಲಾಗಿತ್ತು. ಸಮೀಕ್ಷೆ: ಬನ್ನಿಕೋಡು ಗ್ರಾಮದ ಅಕ್ಕಪಕ್ಕದ ಸಲಗನಹಳ್ಳಿ, ಬೇವಿನಹಳ್ಳಿ ಮುಂತಾದ ಗ್ರಾಮಗಳಲ್ಲೂ ಗುರುವಾರ ಕೋಳಿಗಳ ಸಮೀಕ್ಷೆ ನಡೆಸಲಾಗಿದೆ. ತಾಲೂಕಿನಾದ್ಯಂತ ಎಲ್ಲಾ ಕೋಳಿ ಫಾರಂ ಮಾತ್ರವಲ್ಲದೆ ಸಾಕಿದ ಕೋಳಿಗಳ ಮೇಲೂ ನಿಗಾ ಇಡಲಾಗಿದೆ ಎಂದು ಪಶು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.