Advertisement

ಮುಂಬಡ್ತಿಗೆ ಕ್ರಿಯಾಶೀಲತೆಯೂ ಪರಿಗಣನೆ

05:00 PM Mar 16, 2020 | Naveen |

ಹರಿಹರ: ಕೊಲ್ಲೂರು ಜಾತ್ರೆ, ಪೆರ್ಡೂರು ರಥ ಗೃಹರಕ್ಷಕ ದಳದ ಸಿಬ್ಬಂದಿಗೆ ಮುಂಬಡ್ತಿ ನೀಡುವಾಗ ಸೇವಾ ಜ್ಯೇಷ್ಠತೆಯ ಜತೆಗೆ ಅಭ್ಯರ್ಥಿಯ ಕ್ರಿಯಾಶೀಲತೆಯನ್ನೂ ಪರಿಗಣಿಸಲಾಗುತ್ತದೆ ಎಂದು ಗೃಹರಕ್ಷಕ ದಳದ ಸಮಾದೇಷ್ಟರಾದ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ|ಬಿ. ಎಚ್‌. ವೀರಪ್ಪ ತಿಳಿಸಿದರು.

Advertisement

ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಭಾನುವಾರ ನಡೆದ ಮುಂಬಡ್ತಿ ಪಡೆದ ರಕ್ಷಕರಿಗೆ ಬ್ಯಾಡ್ಜ್ ವಿತರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಿಡುಗಡೆಯಾದ ಮುಂಬಡ್ತಿ ಪಟ್ಟಿಯಲ್ಲಿ ಕೆಲವು ಗೃಹರಕ್ಷಕ ದಳದ ರಕ್ಷಕರಿಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದರು.

ಮುಂಬಡ್ತಿ ನೀಡುವ ಸಂದರ್ಭದಲ್ಲಿ ಕೇವಲ ಸೇವಾ ಜ್ಯೇಷ್ಠತೆ ಮಾತ್ರವಲ್ಲದೆ ಅವರ ಕ್ರಿಯಾಶೀಲತೆ, ಹಾಜರಾತಿ ನಡವಳಿಕೆ ಮತ್ತಿತರೆ ಅಂಶಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ರೀತಿಯ ಪ್ರಕ್ರಿಯೆಯಿಂದ ಜ್ಯೇಷ್ಠತೆ ಹೊಂದಿದ ಕೆಲವರಿಗೆ ಅವಕಾಶ ಸಿಗದಿರಬಹದು. ಈ ಪ್ರಕ್ರಿಯೆಯಲ್ಲೂ ತಮಗೆ ವ್ಯತ್ಯಾಸವಾಗಿದೆ ಎಂಬ ಭಾವನೆಯಿದ್ದರೆ ತಾವು ಘಟಕದ ಮುಖ್ಯಸ್ಥರಿಂದ ವರದಿ ತರಿಸಿಕೊಂಡು ನಮ್ಮ ವ್ಯಾಪ್ತಿಯಲ್ಲಿ ಸರಿಪಡಿಸಲು ಬರುವಂತಿದ್ದರೆ ಖಂಡಿತ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಿಬ್ಬಂದಿ ಅಧಿಕಾರಿ ಕೆ.ಸರಸ್ವತಿ ಮಾತನಾಡಿ ಮುಂಬಡ್ತಿ ಅಥವಾ ಇನ್ಯಾವುದೇ ಪಟ್ಟಿ ಯಾವುದೇ ಕ್ಷೇತ್ರದಲ್ಲಿ ಹೊರ ಬಿದ್ದಾಗ ಅಸಮಾಧಾನಗೊಳ್ಳುವುದು ಸಹಜ ಕ್ರಿಯೆ, ಅದಕ್ಕೆ ಯಾರೇ ಆಗಲಿ ಬೇಸರಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಮುಂಬಡ್ತಿ ಕುರಿತು ಘಟಕ ಅಧಿಕಾರಿಗಳ ಮೂಲಕ ವರದಿಯನ್ನು ಸಲ್ಲಿಸಿದಲ್ಲಿ ನಮ್ಮ ವ್ಯಾಪ್ತಿಯಲ್ಲಿ ಮಾಡುವಂತಿದ್ದರೆ ಖಂಡಿತವಾಗಿ ಪರಿಗಣಿಸಿ ಮುಂಬಡ್ತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ದಾವಣಗೆರೆ ಘಟಕಾಧಿಕಾರಿ ಅಂಬರೀಶ್‌ ಮಾತನಾಡಿ, ಇಂದು ಮುಂಬಡ್ತಿ ಪಡೆದಿರುವ ಎಲ್ಲ ರಕ್ಷಕರುಗಳ ಜವಾಬ್ದಾರಿ ತುಂಬಾ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಹರಿಹರ ಘಟಕಾ ಧಿಕಾರಿ ವೈ.ಆರ್‌. ಗುರುನಾಥ್‌ ಮಾತನಾಡಿ, ಮುಂಬಡ್ತಿ ವಿಷಯದಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವು ಮಹಿಳೆಯರು ತಮಗೆ ಮುಂಬಡ್ತಿ ಬೇಡ ಎಂದು ಮನವಿ ಬರೆದು ಕೊಟ್ಟಿರುತ್ತಾರೆ. ಅಂತಹವರನ್ನು ಈ ಮುಂಬಡ್ತಿ ಪಟ್ಟಿಯಲ್ಲಿ ಪರಿಗಣನೆ ಮಾಡಿರುವುದಿಲ್ಲ ಎಂದು ಸ್ಪಷ್ಟೀಕರಿಸಿದರು.

Advertisement

ರೇಣುಕಾ, ಕೆ.ಎಚ್‌.ಪ್ರಕಾಶ್‌ ಮುಂತಾದವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಎಸ್‌.ಕೇಶವ, ಎಂ.ಎಚ್‌.ಗಣೇಶ್‌, ಲೋಹಿತ್‌, ರೂಪಾ, ಲಕ್ಷ್ಮಿದೇವಿ, ರಾಧಾ, ಎ.ಎಚ್‌. ಮಂಜುಳಾ, ನಿವೃತ್ತ ರಕ್ಷಕರಾದ ಬಿ.ಎಂ.ಚಂದ್ರಶೇಖರ್‌,ಅಶೋಕ್‌ ಅಲ್ಲದೆ ಘಟಕದ ಎಲ್ಲಾ ರಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next