Advertisement
ಮುಖ್ಯರಸ್ತೆಯಿಂದ ಹರೆಗೋಡಿನ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗಲು ಕೂಡ ಈ ರಸ್ತೆ ಪ್ರಮುಖವಾಗಿದ್ದು, ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಹತ್ತಾರು ವಾಹನಗಳು ನಿತ್ಯ ಸಂಚರಿಸುತ್ತವೆ.
ಈ ರಸ್ತೆ ಇಷ್ಟೊಂದು ಹೊಂಡ – ಗುಂಡಿಗಳಿರಲು ಪ್ರಮುಖ ಕಾರಣ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಇದ್ದರೂ ಅದು ಹೂಳು ತುಂಬಿ, ಗಿಡ – ಗಂಟಿ ಬೆಳೆದು ನೀರು ಹರಿಯದಂತಾಗಿದೆ. ಇದರಿಂದ ರಸ್ತೆಯಲ್ಲಿಯೇ ನೀರು ನಿಂತು, ದೊಡ್ಡ – ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಅಪಘಾತವನ್ನು ಆಹ್ವಾನಿಸುವಂತಿದೆ.
Related Articles
ಈ ರಸ್ತೆಯ ಸಂಪೂರ್ಣ ಡಾಮರಿಗೆ ಹೆಚ್ಚಿನ ಅನುದಾನ ಬೇಕಾಗಿದೆ. ಆದರೆ ಈ ವರ್ಷ ಶಾಸಕ ಸುಕುಮಾರ್ ಶೆಟ್ಟಿ ಅವರು ರಸ್ತೆಯ ಅರ್ಧ ಭಾಗದ ಕಾಮಗಾರಿಗೆ ಸುಮಾರು 4-5 ಲ.ರೂ ಅನುದಾನ ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭಿಸುವ ಬಗ್ಗೆ ಗಮನ ಹರಿಸಲಾಗುವುದು.
-ಶೋಭಾ ಜಿ. ಪುತ್ರನ್, ಸ್ಥಳೀಯ ಜಿ.ಪಂ. ಸದಸ್ಯರು
Advertisement
ತುರ್ತಾಗಿ ದುರಸ್ತಿಗೊಳಿಸಿ ಈ ಹಿಂದೆ ಹಲವು ಬಾರಿ ಶಾಸಕರು ಸಹಿತ ಸಂಬಂಧಪಟ್ಟ ಎಲ್ಲರಿಗೂ ಈ ರಸ್ತೆ ಡಾಮರಿಗೆ ಮನವಿ ಮಾಡಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಈಗಲಾದರೂ ಈ ರಸ್ತೆಯ ದುರಸ್ತಿ ಬಗ್ಗೆ ಗಮನಹರಿಸಲಿ.
-ವಿಶ್ವನಾಥ್ ಹರೆಗೋಡು, ರಿಕ್ಷಾ ಚಾಲಕರು,