Advertisement

ಮೊಬೈಲ್‌ ಆ್ಯಪ್‌ ತಂದ ಸಂಕಷ್ಟ

10:12 AM Nov 09, 2019 | Suhan S |

ಬೆಂಗಳೂರು: ಮೊಬೈಲ್‌ ಆ್ಯಪ್‌ನಲ್ಲಿ ಪರಿಚಯವಾದ ಅಪರಿಚಿತ ಯುವತಿಯೊಬ್ಬರು ಖಾಸಗಿ ವಿಡಿಯೋಗಳನ್ನು ಇಟ್ಟು ಕೊಂಡು ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂದು ಸಾಫ್ಟ್ವೇರ್‌ ಎಂಜಿನಿಯರ್‌ವೊಬ್ಬರು ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿತ ಯುವತಿ ಯಾರು ಎಂಬುದನ್ನು ಪತ್ತೆಹಚ್ಚುತ್ತಿದ್ದು ತನಿಖೆ ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ದೂರುದಾರ ಟೆಕ್ಕಿ ಹೊಸ ಸ್ನೇಹಿತರಾಗುವ ಮೊಬೈಲ್‌ ಆ್ಯಪ್‌ವೊಂದನ್ನು ತಮ್ಮ ಮೊಬೈಲ್‌ಗೆ ಇನ್ಸ್ಟಾಲ್ ಮಾಡಿಕೊಂಡಿದ್ದರು. ಈ ಆ್ಯಪ್‌ನಲ್ಲಿ ಪರಿಚಯವಾದ ಪ್ರಿಯಾಸಿಂಗ್‌ ಎಂಬಾಕೆ ಅ. 28ರಂದು ಸಂದೇಶ ಕಳುಹಿಸಿದ್ದಳು. ವಾಪಸ್‌ ವಿಡಿಯೋ ಕರೆ ಮಾಡಿಸಿಕೊಂಡಿದ್ದ ಆಕೆ ಪ್ರಚೋದಿಸಿ ಮಾತನಾಡಿದ್ದಳು. ಇದಾದ ಕೆಲ ದಿನಗಳಲ್ಲಿಯೇ ವಿಡಿಯೋ ಕರೆಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಸಂದೇಶ ಕಳುಹಿಸಿ 30 ಸಾವಿರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next