Advertisement

ಧೋನಿಯ ಹೆಲಿಕಾಪ್ಟರ್‌ ಶಾಟ್‌ ಬಾರಿಸಿದ ಹಾರ್ದಿಕ್‌ ಪಾಂಡ್ಯ

12:35 AM Mar 15, 2019 | Team Udayavani |

ಮುಂಬಯಿ: ಗಾಯದಿಂದ ಚೇತರಿಸಿಕೊಂಡು ಐಪಿಎಲ್‌ಗೆ ಸಿದ್ಧಗೊಳ್ಳುತ್ತಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ವಾಂಖೇಡೆಯಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. 

Advertisement

ನೆಟ್‌ನಲ್ಲಿ ಬೌಲಿಂಗ್‌ ನಡೆಸಿದ ಬಳಿಕ ಅವರು ಬ್ಯಾಟಿಂಗ್‌ ಅಭ್ಯಾಸವನ್ನೂ ನಡೆಸಿದರು. ಈ ವೇಳೆ ಧೋನಿಯಂತೆ “ಹೆಲಿಕಾಪ್ಟರ್‌ ಶಾಟ್‌’ ಬಾರಿಸಿ ಗಮನ ಸೆಳೆದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋ ಪ್ರಕಟಿಸಿದ ಹಾರ್ದಿಕ್‌ ಪಾಂಡ್ಯ “ಈ ಹೊಡೆತದ ಹಿಂದಿರುವ ನನ್ನ ಸ್ಫೂರ್ತಿ ಯಾರೆಂದು ಊಹಿಸಿ’ ಎಂದು ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next