Advertisement

IPL 2023; ಮುಂಬೈಗೆ ಮರಳಿದ ಹಾರ್ದಿಕ್; ಸ್ವಾಗತಿಸಿದ ನೀತಾ ಅಂಬಾನಿ ಹೇಳಿದ್ದೇನು?

03:58 PM Nov 27, 2023 | Team Udayavani |

ಮುಂಬೈ: ಅತ್ಯಂತ ಅಚ್ಚರಿಯ ರೀತಿಯಲ್ಲಿ ಸಾಗಿದ ಟ್ರೇಡಿಂಗ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚೊಚ್ಚಲ ಪ್ರಯತ್ನದಲ್ಲಿಯೇ ಚಾಂಪಿಯನ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ತನ್ನ ಐಪಿಎಲ್ ಜೀವನವನ್ನು ಮುಂಬೈ ಇಂಡಿಯನ್ಸ್ ತಂಡದಿಂದಲೇ ಆರಂಭಿಸಿದ್ದರು. ಎರಡು ವರ್ಷಗಳು ಬೇರ್ಪಟ್ಟ ಬಳಿಕ ಇದೀಗ ಹಾರ್ದಿಕ್ ಮತ್ತೆ ಮುಂಬೈ ಫ್ರಾಂಚೈಸಿಗೆ ಆಗಮಿಸಿದ್ದಾರೆ.

Advertisement

ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆದುಕೊಂಡ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತಮ್ಮಲ್ಲಿದ್ದ 17 ಕೋಟಿ ರೂ ಬೆಲೆಬಾಳುವ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬಿಟ್ಟುಕೊಟ್ಟಿದೆ.

ಹಾರ್ದಿಕ್ ಟ್ರೇಡ್ ಬಗ್ಗೆ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಟೈಟಾನ್ಸ್ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ, “ಗುಜರಾತ್ ಟೈಟಾನ್ಸ್‌ ನ ಮೊದಲ ನಾಯಕನಾಗಿ, ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಎರಡು ಅದ್ಭುತ ಸೀಸನ್ ಗಳನ್ನು ನೀಡಲು ಸಹಾಯ ಮಾಡಿದ್ದಾರೆ. ಅವರು ಈಗ ತಮ್ಮ ಮೂಲ ತಂಡ ಮುಂಬೈ ಇಂಡಿಯನ್ಸ್‌ಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಅವರ ಮುಂದಿನ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ:Sirsi: ಧರಣಿ ಆರಂಭಿಸಿದ ಹೋರಾಟಗಾರ ಅನಂತಮೂರ್ತಿ ಹೆಗಡೆ

ಹಾರ್ದಿಕ್ ಸೇರ್ಪಡೆಯ ಬಗ್ಗೆ ಮಾತನಾಡಿದ ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ, “ಹಾರ್ದಿಕ್ ಅವರನ್ನು ಮನೆಗೆ ಮರಳಿ ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ! ಇದು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನ! ಮುಂಬೈ ಇಂಡಿಯನ್ಸ್‌ ನ ಯುವ ಸ್ಕೌಟೆಡ್ ಪ್ರತಿಭೆಯಿಂದ ಈಗ ಟೀಮ್ ಇಂಡಿಯಾ ಸ್ಟಾರ್ ಆಗಿರುವ ಹಾರ್ದಿಕ್ ಬಹಳ ದೂರ ಸಾಗಿದ್ದಾರೆ, ಅವರ ಮತ್ತು ಮುಂಬೈ ಇಂಡಿಯನ್ಸ್‌ ಗೆ ಭವಿಷ್ಯ ಏನಾಗಲಿದೆ ಎಂದು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next