Advertisement

IPL 2024; ರೋಹಿತ್ ಶರ್ಮ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆ

06:29 PM Dec 15, 2023 | Team Udayavani |

ಮುಂಬಯಿ: ಮಹತ್ವದ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024 ರ ಋತುವಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದೆ. 10 ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದ ರೋಹಿತ್ ಶರ್ಮ ಅವರ ಬಳಿಕ ಜವಾಬ್ದಾರಿಯನ್ನು ಪಾಂಡ್ಯ ಅವರ ಹೆಗಲಿಗೆ ನೀಡಲಾಗಿದೆ.

Advertisement

2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯಾ ಕಳೆದ ತಿಂಗಳು ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ರೋಹಿತ್ ನಂತರ ನಾಯಕನ ಪಾತ್ರವನ್ನು ಪಾಂಡ್ಯಾ ವಹಿಸಲು ಸಿದ್ಧರಾಗಿದ್ದಾರೆ.ರೋಹಿತ್, ಧೋನಿ ನಾಯಕರಾಗಿ ತಲಾ ಐದು ಬಾರಿ ಪ್ರಶಸ್ತಿಯನ್ನು ಗೆದ್ದ ಹಿರಿಮೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next