ಮುಂಬೈ: ಗಾಯದ ಸಮಸ್ಯೆಯಿಂದ ಕಳೆದ ಕೆಲ ತಿಂಗಳಿನಿಂದ ತಂಡದಿಂದ ದೂರವಾಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ರವಿವಾರ ಸಭೆ ಸೇರಲಿರುವ ಆಯ್ಕೆ ಸಮಿತಿ ಕಿವೀಸ್ ಸರಣಿಗೆ ತಂಡ ಪ್ರಕಟಿಸಲಿದೆ. ಅದರಲ್ಲಿ ನಿಗದಿತ ಓವರ್ ಕ್ರಿಕೆಟ್ ಗೆ ಬಿಗ್ ಹಿಟ್ಟರ್ ಹಾರ್ದಿಕ್ ಕಮ್ ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಜನವರಿ 24ರಿಂದ ಭಾರತ- ನ್ಯೂಜಿಲ್ಯಾಂಡ್ ಸರಣಿ ಆರಂಭವಾಗಲಿದೆ. ಆರು ವಾರಗಳ ಕಾಲ ನಡೆಯುವ ಸರಣಿಯಲ್ಲಿ ಐದು ಟಿ ಟ್ವೆಂಟಿ ಪಂದ್ಯಗಳು, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳು ನಡೆಯಲಿದೆ.
ಒಟ್ಟು 8 ನಿಗದಿತ ಓವರ್ ಪಂದ್ಯಗಳು ನಡೆಯಲಿರುವ ಕಾರಣ ಆಯ್ಕೆ ಸಮಿತಿ 15 ಸದಸ್ಯರ ಬದಲಿಗೆ 16 ಅಥವಾ 17 ಮಂದಿಯ ತಂಡವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಬೆನ್ನುನೋವಿಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ನಂತರ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಸದ್ಯ ಫಿಟ್ ಆಗಿರುವ ಪಾಂಡ್ಯ ಇಂಡಿಯಾ ಎ ತಂಡದಲ್ಲಿ ಸ್ಥಾನ ಪಡೆದಿದ್ದು, ಕಿವೀಸ್ ಎ ವಿರುದ್ಧ ಆಡಲಿದೆ.