ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ತಂದೆಯಾದ ಸಂತಸದಲ್ಲಿದ್ದಾರೆ. ಹಾರ್ದಿಕ್ ಪ್ರೇಯಸಿ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸ್ವತಃ ಹಾರ್ದಿಕ್ ಪಾಂಡ್ಯ ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಮಗುವಿನ ಬೆರಳಿನ ಚಿತ್ರದೊಂದಿಗೆ ತಂದೆಯಾದ ಸಂತಸವನ್ನು ಹಂಚಿಕೊಂಡಿದ್ದಾರೆ.
ಪ್ರೇಯಸಿ ನಟಿ ನತಾಶಾ ಸ್ಟಾನ್ಕೋವಿಕ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಈ ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ವಿತಾರ್ಥದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸರ್ ಪ್ರೈಸ್ ನೀಡಿದ್ದರು ಹಾರ್ದಿಕ್.
ನಂತರ ಮೇ 31ರಂದು ನತಾಶಾ ಗರ್ಭಿಣಿಯಾಗಿರುವ ವಿಚಾರವನ್ನು ಟ್ವಟ್ಟರ್ ನಲ್ಲಿ ತಿಳಸಿದ್ದರು. ಈ ವಿಚಾರದಿಂದ ಕೆಲವು ದಿನಗಳ ಕಾಲ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡಿತ್ತು.
Related Articles
ಟೀಂ ಇಂಡಿಯಾ ಪ್ರಮುಖ ಆಲ್ ರೌಂಡರ್ ಆಗಿರುವ 26 ವರ್ಷದ ಹಾರ್ದಿಕ್ ಪಾಂಡ್ಯ, ಗಾಯಾಳಾಗಿ ಶಸ್ತ್ರಚಿಕಿತ್ಸೆ ಒಳಗಾಗಿ ಈಗ ಫಿಟ್ ಆಗಿದ್ದಾರೆ. ಮುಂದಿನ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಹಾರ್ದಿಕ್ ಎದುರು ನೋಡುತ್ತಿದ್ದಾರೆ.