Advertisement

MI; 3 ಸೋಲಿನ ನಂತರ ಜಯ: ತಂಡದ ಮೇಲಿನ ‘ಪ್ರೀತಿ ಮತ್ತು ಕಾಳಜಿ’ಗೆ ಹಾರ್ದಿಕ್ ಸಂತಸ

09:16 PM Apr 07, 2024 | Team Udayavani |

ಮುಂಬೈ: ಇಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 29 ರನ್‌ಗಳ ಜಯ ಸಾಧಿಸಿತು. ಸತತ ಮೂರು ಸೋಲಿನ ಬಳಿಕ ಗೆಲುವಿಗಾಗಿ ಪಣ ತೊಟ್ಟ ಮುಂಬೈ ಇಂಡಿಯನ್ಸ್ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.235 ರನ್‌ಗಳ ದೊಡ್ಡ ಮೊತ್ತ ಕಲೆ ಹಾಕಿದರು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಅವರಿಗೆ ಬೆಂಬಲದ ಕೊರತೆ ಎದುರಾಯಿತು. 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಪಾಂಡ್ಯ ‘ಬಹಳಷ್ಟು ಪ್ರೀತಿ ಮತ್ತು ಕಾಳಜಿ ಇತ್ತು, ನಾವು ಮೂರು ಪಂದ್ಯಗಳನ್ನು ಕಳೆದುಕೊಂಡಿದ್ದೇವೆ ಎಂದು ಎಲ್ಲರಿಗೂ ತಿಳಿದಿದೆ.  ಆದರೆ ನಂಬಿಕೆ ಮತ್ತು ಬೆಂಬಲ ಇತ್ತು, ನಮಗೆ ಕೇವಲ ಒಂದು ಗೆಲುವು ಬೇಕು ಎಂದು ಎಲ್ಲರೂ ನಂಬಿದ್ದರು ಇಂದು ಪ್ರಾರಂಭವಾಗಿದೆ ಎಂದು ಹೇಳಿದರು.

“ತುಂಬಾ ಕಠಿಣ ಕೆಲಸವಾಗಿತ್ತು. ನಾವು ನಮ್ಮ ಮನಸ್ಸನ್ನು ತೆರೆಯಬೇಕಾಗಿತ್ತು. ನಾವು ನಂಬಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕಾಗಿತ್ತು” ಎಂದರು.

ಫಲಿಸಿದ ಪೂಜೆ
ಮುಂಬೈ ತಂಡದ ನಾಯಕತತ್ವವನ್ನು ರೋಹಿತ್ ಶರ್ಮ ಅವರನ್ನು ಬದಲಾಯಿಸಿ ಹಾರ್ದಿಕ್ ಅವರಿಗೆ ನೀಡಿದ ಬಳಿಕ ಸತತ ಸೋಲುಗಳಿಗಾಗಿ ವ್ಯಾಪಕ ಟೀಕೆಗೆ ವ್ಯಕ್ತವಾಗಿತ್ತು. ಆ ಬಳಿಕ ಗುಜರಾತ್ ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಾರ್ದಿಕ್ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದರು.

Advertisement

ಸುಧಾರಿಸುವ ಅಗತ್ಯವಿದೆ: ಪಂತ್

ಡೆಲ್ಲಿ ಕ್ಯಾಪಿಟಲ್ಸ್‌ಗೆ ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೆಳಭಾಗದಲ್ಲಿದ್ದಾರೆ. ನಾಯಕ ರಿಷಬ್ ಪಂತ್, ಕಳಪೆ ಬ್ಯಾಟಿಂಗ್ ಮತ್ತು ಡೆತ್ ಓವರ್‌ಗಳ ಬೌಲಿಂಗ್‌ ಸೋಲಿಗೆ ಕಾರಣವೆಂದು ಆರೋಪಿಸಿದರು. ಆನ್ರಿಚ್ ನಾರ್ಟ್ಜೆ ಅಂತಿಮ ಓವರ್‌ನಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಡೆಲ್ಲಿಗೆ ಭಾರಿ ಹಿನ್ನಡೆ ತಂದಿಟ್ಟಿತು.

“ಬೌಲರ್‌ಗಳು ವಿಕೆಟ್‌ಗೆ ಬೌಲ್ ಮಾಡಬೇಕಾಗಿತ್ತು, ನಿಧಾನವಾದವರು, ವ್ಯತ್ಯಾಸಗಳು ಮುಖ್ಯವಾದವು. ಬೌಲರ್‌ಗಳು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಿತ್ತು. ಡೆತ್-ಓವರ್ ಬೌಲಿಂಗ್ ಮತ್ತು ನಮ್ಮ ಬ್ಯಾಟಿಂಗ್ ನಲ್ಲಿ ಸುಧಾರಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ.

ಮುಂಬೈ ಅಬ್ಬರ
ರೋಹಿತ್ ಶರ್ಮ 49(27 ಎಸೆತ), ಇಶಾನ್ ಕಿಶನ್ 42(23 ಎಸೆತ) ಉತ್ತಮ ಆರಂಭ ಒದಗಿಸಿ ಔಟಾದರು. ತಂಡ ಸೇರಿಕೊಂಡ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 39(33 ಎಸೆತ) ಗಳಿಸಿ ಔಟಾದರು. ತಿಲಕ್ ವರ್ಮ 6, ಟಿಮ್ ಡೇವಿಡ್ ಔಟಾಗದೆ 45(21ಎಸೆತ) ಮತ್ತು ರೊಮಾರಿಯೋ ಶೆಫರ್ಡ್ ಕೇವಲ10 ಎಸೆತದಲ್ಲಿ 39 ರನ್ ಚಚ್ಚಿದರು.ಅವರು 3 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು. ನೋರ್ಟ್ಜೆ ಎಸೆದ ಕೊನೆಯ ಓವರ್ ನಲ್ಲಿ 4 ಸಿಕ್ಸರ್ ಮತ್ತು ಎರಡು ಬೌಂಡರಿ ಚಚ್ಚಿದರು.

ಡೆಲ್ಲಿ ಪರ ಪೃಥ್ವಿ ಶಾ 66, ಅಭಿಷೇಕ್ ಪೊರೆಲ್ 41, ಡೇವಿಡ್ ವಾರ್ನರ್ 10 ಹೊರತು ಪಡಿಸಿ ಉಳಿದ ಆಟಗಾರರು ಗೆಲುವಿನ ದಡ ಸೇರಿಸುವಲ್ಲಿ ಸಾಥ್ ನೀಡಲು ವಿಫಲರಾದರು. ಮುಂಬೈಯ ಜೆರಾಲ್ಡ್ ಕೊಟ್ಜಿ 4 ವಿಕೆಟ್ ಕಬಳಿಸಿ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next