Advertisement

ಹರ್ಡೇಕರ ಮಂಜಪ್ಪ ಆದರ್ಶಪ್ರಾಯ

02:29 PM Feb 13, 2017 | |

ಧಾರವಾಡ: ನಾಡಿನ ಉದ್ದಗಲಕ್ಕೂ ಸಂಚರಿಸಿ, ಜನಜಾಗೃತಿ ಮೂಡಿಸಿದ ಮಹಾನ್‌ ಸಾಧಕ ಹರ್ಡೇಕರ ಮಂಜಪ್ಪನವರು ಇಡೀ ಜನ ಸಮುದಾಯಕ್ಕೆ ಇಂದಿಗೂ ಪ್ರಸ್ತುತ ಹಾಗೂ ಆದರ್ಶ ಪ್ರಾಯರಾಗಿದ್ದಾರೆ ಎಂದು ಮನಗುಂಡಿಯ ಶ್ರೀಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು. 

Advertisement

ತಾಲೂಕಿನ ಮನಗುಂಡಿಯ ಶ್ರೀಗುರು ಬಸವ ಮಹಾಮನೆಯ ಚನ್ನಯ್ಯನಗಿರಿಯಲ್ಲಿ ರವಿವಾರ ನಡೆದ 103ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ಅಂತಹ ಪುಣ್ಯ ಪುರುಷರ ಜೀವನವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕು. ತಮ್ಮ ಜೀವನವನ್ನೇ ಸಮಾಜಕ್ಕೆ ಮುಡುಪಾಗಿಟ್ಟಿದ್ದ ಸಾûಾತ್‌ ಗಾಂಧೀಜಿಯೇ ಆಗಿದ್ದ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಬದುಕು, ಬರಹವನ್ನು ಪಠ್ಯ-ಪುಸ್ತಕದಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು. 

ಜಾತಿ, ಮತ, ಪಂಥ ಎಂಬ ಯಾವುದೇ ಭೇದ-ಭಾವ ಮಾಡದೆ ಎಲ್ಲವನ್ನೂ ಮೀರಿ ಕೆಲಸ ಮಾಡಿದರು. ಅಲ್ಲದೆ, ಸ್ವತಃ ಮಹಾತ್ಮ ಗಾಂಧೀಜಿಯ ಒಡನಾಡಿಯಾಗಿದ್ದರೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲಿಲ್ಲ. ಹೀಗಾಗಿಯೇ ಅವರನ್ನು ನಮ್ಮ ರಾಜಕೀಯ ವ್ಯಕ್ತಿಗಳು ಮರೆತಂತೆ ಕಾಣುತ್ತಿದ್ದಾರೆ.

ಇದು ರ್ದುದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹರ್ಡೇಕರ ಮಂಜಪ್ಪನವರು ಮಹಿಳೆಯರು, ತರುಣರು ಹಾಗೂ ಮಕ್ಕಳಿಗಾಗಿಯೇ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಸಾಹಿತ್ಯದ ಕುರಿತು ಆಳ ಅಧ್ಯಯನ ಮಾಡಬೇಕಿದೆ. ಅವರ ಪರಿಶುದ್ಧ ಬದುಕು ಇತರರಿಗೆ ಮಾದರಿಯಾಗಿದ್ದು, ಅಂತರಂಗ ಹಾಗೂ ಬಹಿರಂಗ ಎರಡು ಒಂದೇ ಆಗಿದ್ದವು ಎಂದು ಹೇಳಿದರು. 

Advertisement

ಚಿಕ್ಕೋಡಿಯ ಶಿವಾನಂದ ಮಠದ ಡಾ| ಶ್ರದ್ಧಾನಂದ ಸ್ವಾಮೀಜಿ ಮಾತನಾಡಿ, ಸತ್ಸಂಗ ಹಾಗೂ ಗುರುವಿನ ಸಂಗ ಮಾಡಿದವರ ಜೀವನ ಪಾವನವಾಗುತ್ತದೆ. ಅವರಲ್ಲಿ ಜ್ಞಾನ, ಅನುಭಾವ ಹಾಗೂ ಅಂತರಂಗದ ಸೌಂದರ್ಯ ಇರುತ್ತದೆ. ಹೀಗಾಗಿ ಮಹಾತ್ಮರ ಸನ್ನಿಧಾನದಲ್ಲಿ ಕಾಲ ಕಳೆಯಬೇಕು. ಭಕ್ತಿ ಮಾರ್ಗದಲ್ಲಿ ನಡೆದರೆ ಒಳಿತಾಗಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next