Advertisement

Swapna Mantapa Movie: ತೆರೆಗೆ ಬರಲು ಸಿದ್ಧವಾದ ಸ್ವಪ್ನ ಮಂಟಪ

08:06 PM Aug 15, 2024 | Team Udayavani |

ಬಾಬು ನಾಯ್ಕ್ ಅವರು ತಮ್ಮ ಮಲೈ ಮಹದೇಶ್ವರ ಎಂಟರ್‌ಪ್ರೈಸಸ್‌ ಸಂಸ್ಥೆಯಿಂದ ನಿರ್ಮಾಣ ಮಾಡಿರುವ “ಸ್ವಪ್ನ ಮಂಟಪ’ ಚಿತ್ರ ಸೆನ್ಸಾರ್‌ ಆಗಿದೆ.

Advertisement

ಸೆನ್ಸಾರ್‌ ಮಂಡಳಿಯು ಈ ಚಿತ್ರದ ಆಶಯ ಮತ್ತು ಅಭಿವ್ಯಕ್ತಿ ವಿಧಾನವನ್ನು ಮೆಚ್ಚಿ “ಯು’ ಪ್ರಮಾಣ ಪತ್ರ ನೀಡಿದೆ.

“ಸ್ವಪ್ನ ಮಂಟಪ’ ಚಿತ್ರವನ್ನು ಬರಗೂರು ರಾಮಚಂದ್ರಪ್ಪನವರು ತಮ್ಮದೇ ಕಾದಂಬರಿಯನ್ನು ಆಧರಿಸಿ ಚಿತ್ರಕತೆ, ಸಂಭಾಷಣೆ, ಗೀತರಚನೆ

ಮಾಡುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸುವ ಕಥಾ ವಸ್ತು ಒಳಗೊಂಡಿದೆ. ಕಥಾ ನಾಯಕರಾಗಿ ವಿಜಯ ರಾಘವೇಂದ್ರ ಮತ್ತು ನಾಯಕಿಯಾಗಿ ರಂಜಿನಿ ರಾಘವನ್‌ ಅಭಿನಯಿಸಿದ್ದಾರೆ.

ಇಬ್ಬರೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಒಂದು ವಿಶೇಷ. ಉಳಿದ ತಾರಾಗಣದಲ್ಲಿ ಸುಂದರರಾಜ್‌, ಶೋಭಾ ರಾಘವೇಂದ್ರ, ರಜಿನಿ, ಸುಂದರರಾಜ ಅರಸು, ಅಂಬರೀಶ್‌ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್‌, ಭಾರತಿ ರಮೇಶ್‌, ಗುಂಡಿ ರಮೇಶ್‌ ಮತ್ತಿತರರು ಇದ್ದಾರೆ. ಈ ಚಿತ್ರವು ಸುರೇಶ್‌ ಅರಸು ಸಂಕಲನ, ನಾಗರಾಜ್‌ ಆದವಾನಿ ಛಾಯಾ ಗ್ರಹಣ, ಶಮಿತಾ ಮಲಾ°ಡ್‌ ಸಂಗೀತ ನಿರ್ದೇಶನ, ತ್ರಿಭುವನ್‌ ನೃತ್ಯ ಸಂಯೋಜನೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next