Advertisement

ದೇಶಕ್ಕೆ ಸಮರ್ಥ ಪ್ರತಿಪಕ್ಷದ ಅಗತ್ಯವಿದೆ : ಸಚಿವ ಹರ್ದೀಪ್ ಸಿಂಗ್ ಪುರಿ

07:02 PM May 07, 2022 | Team Udayavani |

ಪಣಜಿ: ಭಾರತೀಯ ಜನತಾ ಪಕ್ಷವು ಕಾಂಗ್ರೇಸ್ ಮುಕ್ತ ಭಾರತವನ್ನು ಬಯಸುತ್ತದೆ, ಆದರೆ ಇದರರ್ಥ ನಾವು ಕಾಂಗ್ರೇಸ್ ಪಕ್ಷದ ಅಸ್ಥಿತ್ವವನ್ನು ಕೊನೆಗೊಳಿಸಲು ಬಯಸುತ್ತೇವೆ ಎಂದಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

Advertisement

ಶುಕ್ರವಾರ ಗೋವಾ ಫೆಸ್ಟ್ -2022 ರಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು – ಭಾರತಕ್ಕೆ ಸಮರ್ಥ ಪ್ರತಿಪಕ್ಷದ ಅಗತ್ಯವಿದೆ. ಈ ವಿರೋಧ ಪಕ್ಷ ಅಥವಾ ಪಕ್ಷಗಳ ಗುಂಪನ್ನು ಯಾರು ಮುನ್ನಡೆಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮತ್ತು ಅರವಿಂದ್ ಕೇಜ್ರಿವಾಲ್ ರವರು ಈ ಹುದ್ಧೆಯ ಆಕಾಂಕ್ಷಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿ ಒಲವು ತೋರಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ. ನಾವು ಕಾಂಗ್ರೇಸ್ ಪಕ್ಷವನ್ನು ಕೊನೆಗಾಣಿಸಲು ಬಯಸುವುದಿಲ್ಲ. ದೇಶಕ್ಕೆ ಸಮರ್ಥ ಪ್ರತಿಪಕ್ಷದ ಅಗತ್ಯವಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರು ಬಿಜೆಪಿಗೆ ಒಲವು ತೋರಿದ್ದಾರೆ ಎಂಬುದು ನನಗೆ ಖಚುತವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

ಇದನ್ನೂ ಓದಿ : ರಾಗಿ ಖರೀದಿ ನೋಂದಣಿಗೆ ಮತ್ತೆ ವಿಘ್ನ: ಅನ್ನದಾತ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next