Advertisement

ಜಮ್ಮು : ಕಟ್ಟಾ ಕ್ರಿಮಿನಲ್‌ ನರೀಂದರ್‌ ಕುಮಾರ್‌ ಸೆರೆ, ಜೈಲಿಗೆ

05:17 PM Apr 05, 2018 | udayavani editorial |

ಜಮ್ಮು : ಹಲವಾರು ಗಂಭೀರ ಅಪರಾಧಗಳಲ್ಲಿ ತೊಡಗಿಕೊಂಡಿದ್ದ  ಆರ್‌ ಎಸ್‌ ಪುರ ಪ್ರದೇಶದ ವಾಸಿ, ಕಟ್ಟರ್‌ ಕ್ರಿಮಿನಲ್‌, ನರೀಂದರ್‌ ಕುಮಾರ್‌ ಅಲಿಯಾಸ್‌ ಟೆಕ್ಕಿ ಯನ್ನು ಬಂಧಿಸಿರುವ ಜಮ್ಮು ಕಾಶ್ಮೀರ ಪೊಲೀಸರು ಆತನ ವಿರುದ್ಧ  ಸಾರ್ವಜನಿಕ ಸುರಕ್ಷಾ ಕಾಯಿದೆಯನ್ನು ಅನ್ವಯಿಸಿ ಕೇಸು ಹಾಕಿ ಕೋರ್ಟ್‌ ಆದೇಶದ ಪ್ರಕಾರ ನಗರದಲ್ಲಿನ ಕೋಟ್‌ ಭಲವಾಲ್‌ ಜೈಲಿಗೆ ಅಟ್ಟಿದ್ದಾರೆ.

Advertisement

ಆರೋಪಿ ಕುಮಾರ್‌ ವಿರುದ್ಧ ಐದು ಕೊಲೆ ಯತ್ನದ ಕೇಸುಗಳು, ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಮಾರಾಟದ ಕೇಸುಗಳು ಇವೆ. ಪೊಲೀಸರ ಸಲಹೆ ಪ್ರಕಾರ ಜಮ್ಮು ಜಿಲ್ಲಾ ಮ್ಯಾಜಿಸ್ಟ್ರೇಟರು ಕುಮಾರ್‌ ವಿರುದ್ಧ ಸಾರ್ವಜನಿಕ ಸುರಕ್ಷಾ ಕೇಸು ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next