Advertisement

Agnipath Rally;ಸಾಧನೆಗೆ ಕಠಿನ ಪರಿಶ್ರಮ ಅಗತ್ಯ: ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ

12:04 AM Jul 18, 2023 | Team Udayavani |

ಉಡುಪಿ: ಯುವಜನತೆ ಜೀವನದಲ್ಲಿ ಉನ್ನತ ಸಾಧನೆಗಾಗಿ ಗುರಿ ತಲುಪಲು ನಿರಂತರ ಪರಿಶ್ರಮ ಪಡ‌ಬೇಕು ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಕೆ. ಹೇಳಿದರು.

Advertisement

ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಗ್ನಿಪಥ್‌ ಸೇನಾ ನೇಮಕಾತಿ ರ‍್ಯಾಲಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗುರಿ ಸಾಧನೆಗೆ ಕಠಿನ ಶ್ರಮ ಪಡಬೇಕು. ಶ್ರಮ ಪಟ್ಟರೆ ಸ್ವಲ್ಪ ತಡವಾದರೂ ಪ್ರತಿಫ‌ಲ ದೊರೆಯುತ್ತದೆ. ಯಾವ ಸಂದರ್ಭದಲ್ಲಿಯೂ ನಿರಾಶರಾಗದೇ ಮುಂದೆ ಸಾಗಿದಲ್ಲಿ ಯಶಸ್ಸು ಖಚಿತ. ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖರಾಗಬೇಕು ಎಂದರು.

ಉನ್ನತ ಧ್ಯೇಯದಿಂದ ಅಗ್ನಿಪಥ್‌ ಮೂಲಕ ದೇಶರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗುತ್ತಿರುವ ಯುವಜನರ ಕನಸು ಸಾಕಾರಗೊಂಡು ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌., ಸೇನೆ ಮೇಜರ್‌ ಜನರಲ್‌ ಆರ್‌.ಆರ್‌. ರೈನಾ, ಸೇನಾ ನೇಮಕಾತಿ ಮಂಗಳೂರು ವಿಭಾಗದ ಮುಖ್ಯಸ್ಥ ಕ| ಅನುಜ್‌ ಗುಪ್ತಾ ಉಪಸ್ಥಿತರಿದ್ದರು.

Advertisement

ಮೊದಲ ದಿನ 665 ಅಭ್ಯರ್ಥಿಗಳು
ರ‍್ಯಾಲಿಯಲ್ಲಿ ವಿವಿಧ ಜಿಲ್ಲೆಗಳ 665 ಅಭ್ಯರ್ಥಿಗಳು ಮೊದಲ ದಿನ ಪಾಲ್ಗೊಂಡಿದ್ದರು. ಓಟ, ಕಂದಕ ಜಿಗಿತ ಸಹಿತ ವಿವಿಧ ದೈಹಿಕ ಪರೀಕ್ಷೆಗಳ ಅನಂತರ ವೈದ್ಯಕೀಯ ಪರೀಕ್ಷೆ ನಡೆಯಿತು. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 6,800ಕ್ಕೂ ಅಧಿಕ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಲು ನೋಂದಣಿ ಮಾಡಿ ಕೊಂಡಿದ್ದು, ಅಗ್ನಿವೀರ್‌ ಜನರಲ್‌ ಡ್ನೂಟಿ, ಅಗ್ನಿವೀರ್‌ ಟೆಕ್ನಿಕಲ್‌, ಅಗ್ನಿವೀರ್‌ ಟ್ರೇಡ್ಸ್‌ಮೆನ್‌, ಅಗ್ನಿವೀರ್‌ ಕ್ಲರ್ಕ್‌/ಸ್ಟೋರ್‌ ಕೀಪರ್‌ ಹು¨ªೆಗಳಿಗೆ ನೇಮಕಾತಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next